Asianet Suvarna News Asianet Suvarna News

Yash Birthday: ಕುಟುಂಬದೊಂದಿಗೆ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ರಾಕಿ ಭಾಯ್

ಪ್ಯಾನ್ ಇಂಡಿಯಾ ರಾಕಿಂಗ್‌ ಸ್ಟಾರ್‌ ಯಶ್‌ ಅವರು 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಕೇವಲ ಕುಟುಂಬ ಸದಸ್ಯರೊಂದಿಗೆ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. 

First Published Jan 9, 2022, 12:40 PM IST | Last Updated Jan 9, 2022, 12:44 PM IST

ಪ್ಯಾನ್ ಇಂಡಿಯಾ ರಾಕಿಂಗ್‌ ಸ್ಟಾರ್‌ ಯಶ್‌ (Yash) ಅವರು 36ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡಿದ್ದಾರೆ. ಕೋವಿಡ್‌ (Covid) ಹಿನ್ನೆಲೆಯಲ್ಲಿ ಕೇವಲ ಕುಟುಂಬ ಸದಸ್ಯರೊಂದಿಗೆ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್ (Radhika Pandit) ಹಾಗೂ ಇಬ್ಬರು ಮಕ್ಕಳೊಂದಿಗೆ  ಹುಟ್ಟುಹಬ್ಬ ಆಚರಣೆಯ ಫೋಟೊಗಳನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರದ ಗಣ್ಯರು ಕೂಡ ಯಶ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಯಶ್ ಹುಟ್ಟುಹಬ್ಬದ ಪ್ರಯುಕ್ತ 'ಕೆಜಿಎಫ್ 2' (KGF 2) ಚಿತ್ರತಂಡ ಸ್ಪೆಷಲ್ ಪೋಸ್ಟರ್‌ನ್ನು (Poster) ಬಿಡುಗಡೆ ಮಾಡಿದ್ದಾರೆ.

Yash Birthday: ರಜೆ ಕೋರಿ ಪ್ರಾಂಶುಪಾಲರಿಗೆ ಪತ್ರ ಬರೆದ ರಾಕಿಂಗ್ ಅಭಿಮಾನಿ

ಪೋಸ್ಟರ್‌ನಲ್ಲಿ ಯಶ್ ಡೆಡ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ 'ಎಚ್ಚರ ಮುಂದೆ ಅಪಾಯವಿದೆ' ಎಂಬ ಬರಹವಿದೆ. ಈ ಪೋಸ್ಟರನ್ನು ಹೊಂಬಾಳೆ ಸಂಸ್ಥೆ (Hombale Films) ಹಾಗೂ 'ಕೆಜಿಎಫ್‌' ನಿರ್ದೇಶಕ ಪ್ರಶಾಂತ್‌ ನೀಲ್‌ (Prashanth Neel) ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಹ್ಯಾಪ್ ಬರ್ತ್ ಡೇ ಮೈ ರಾಕಿ ಬಾಯ್ ಎಂದು ಪ್ರಶಾಂತ್ ನೀಲ್ ಬರೆದುಕೊಂಡಿದ್ದಾರೆ. ಇನ್ನು ಯಶ್ ಅಭಿಮಾನಿಗಳು (Fans) 'ಕೆಜಿಎಫ್ 2' ಸಿನಿಮಾದ ಹೊಸ ಪೋಸ್ಟರ್‌ನ್ನು ಟ್ವಿಟ್ಟರ್‌ನಲ್ಲಿ (Twitter) ಟ್ರೆಂಡಿಂಗ್ ಮಾಡಿದ್ದು, ಯಶ್‌ಬಾಸ್ ಬರ್ತ್‌ಡೇ ಎನ್ನುವ ಆ್ಯಶ್ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ, ಗುಜರಾತ್‌ನಿಂದ ಬಂಗಾಳದವರೆಗೂ ಪ್ಯಾನ್‌ ಇಂಡಿಯಾ ಟ್ವೀಟರ್ ಟ್ರೆಂಡಿಂಗ್ (Trending) ಮಾಡಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment