Asianet Suvarna News Asianet Suvarna News

Yash Birthday: ರಜೆ ಕೋರಿ ಪ್ರಾಂಶುಪಾಲರಿಗೆ ಪತ್ರ ಬರೆದ ರಾಕಿಂಗ್ ಅಭಿಮಾನಿ

ರಾಕಿಂಗ್ ಸ್ಟಾರ್ ಯಶ್. ಈ ಹೆಸರು ಕೇಳಿದರೆ ಅದೆಷ್ಟೋ ಯಶ್ ಅಭಿಮಾನಿಗಳ ಮೈ ನರ ನಾಡಿಯಲ್ಲಾ ರೋಮಾಂಚನ ಆಗುತ್ತೆ. ಕೋವಿಡ್ ಕಾರಣದಿಂದ ಯಶ್ ಈ ಭಾರಿ ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ರಾಕಿಂಗ್ ಸ್ಟಾರ್ ಕಟ್ಟಾಭಿಮಾನಿಯೊಬ್ಬ ಯಶ್ ಹುಟ್ಟುಹಬ್ಬ ಆಚರಿಸೋದಕ್ಕೆ ಭರ್ಜರಿ ಪ್ಲಾನ್ ರೆಡಿ ಮಾಡಿದ್ದಾರೆ. 

First Published Jan 8, 2022, 2:27 PM IST | Last Updated Jan 8, 2022, 2:27 PM IST

ರಾಕಿಂಗ್ ಸ್ಟಾರ್ ಯಶ್ (Yash). ಈ ಹೆಸರು ಕೇಳಿದರೆ ಅದೆಷ್ಟೋ ಯಶ್ ಅಭಿಮಾನಿಗಳ ಮೈ ನರ ನಾಡಿಯಲ್ಲಾ ರೋಮಾಂಚನ ಆಗುತ್ತೆ. ಕೋವಿಡ್ ಕಾರಣದಿಂದ ಯಶ್ ಈ ಭಾರಿ ಅಭಿಮಾನಿಗಳ ಜೊತೆ ಜನ್ಮದಿನ (Birthday) ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ರಾಕಿಂಗ್ ಸ್ಟಾರ್ ಕಟ್ಟಾಭಿಮಾನಿಯೊಬ್ಬ ಯಶ್ ಹುಟ್ಟುಹಬ್ಬ ಆಚರಿಸೋದಕ್ಕೆ ಭರ್ಜರಿ ಪ್ಲಾನ್ ರೆಡಿ ಮಾಡಿದ್ದಾರೆ. ಜನವರಿ 8ರಂದು ರಾಕಿಗೆ ಜನ್ಮ ದಿನ. ಈ ದಿನವನ್ನು ಯಶ್ ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಣೆ ಮಾಡ್ತಾರೆ. ಹೀಗಾಗಿ ಈ ಭಾರಿ ತಮ್ಮ ಬಾಸ್ ಹುಟ್ಟುಹಬ್ಬ ಆಚರಿಸಲು ರಜೆ ಬೇಕು ಎಂದು ಬಳ್ಳಾರಿಯಲ್ಲಿ ವಿದ್ಯಾರ್ಥಿಯೊಬ್ಬ ತಮ್ಮ ಪ್ರಾಂಶುಪಾಲರಿಗೆ ಪತ್ರ (Letter) ಬರೆದಿದ್ದಾನೆ. ಆ ಲೆಟರ್ ಇದೀಗ ಸಖತ್ ವೈರಲ್ (Viral) ಆಗಿದೆ.

Puneeth Rajkumar: ಗಣರಾಜ್ಯೋತ್ಸವಕ್ಕೆ ಅಪ್ಪು ಕೊನೆಯ ಚಿತ್ರದ ಪೋಸ್ಟರ್ ರಿಲೀಸ್!

ಬಳ್ಳಾರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಕೆ. ಶಿವಕುಮಾರ್ ಎಂಬ ವಿದ್ಯಾರ್ಥಿ ಯಶ್ ಅವರ ಕಟ್ಟಾಭಿಮಾನಿ. ಯಶ್ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ಜ.7ರಂದು ಟ್ವಿಟರ್‌ನಲ್ಲಿ ಎಲ್ಲ ಅಭಿಮಾನಿಗಳು 24 ಗಂಟೆಗಳ ಟ್ರೆಂಡ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಕೆ. ಶಿವಕುಮಾರ್ ಅನ್ನೋ ಯಶ್ ಅಭಿಮಾನಿ ಕೂಡ ಈ ಟ್ವಿಟರ್ ಟ್ರೆಂಡಿಂಗ್‌ನಲ್ಲಿ (Twitter Trending) ಭಾಗವಹಿಸಿ ಯಶ್ ಅಣ್ಣನ ಜನ್ಮದಿನದ ಶುಭಾಶಯಗಳನ್ನು ತಿಳಿಸಬೇಕೆಂದು ನಿರ್ಧಾರ ಮಾಡಿದ್ದಾನೆ. ಇದಕ್ಕಾಗಿ  ನನಗೆ ಇದೇ ಜ.7ರಂದು ರಜಾ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಯಶ್ ಅಭಿಮಾನಿ ಕೆ ಶಿವಕುಮಾರ್ ತಮ್ಮ ಕಾಲೇಜು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment