Asianet Suvarna News Asianet Suvarna News

Madhagaja Title Song: ಟಾಲಿವುಡ್‌ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಟ್ರೆಂಡ್

ಮದಗಜ ಚಿತ್ರದ ತೆಲುಗು ಟೈಟಲ್ ಸಾಂಗ್ ಬಿಡುಗಡೆಯಾಗಿದ್ದು, ಬೃಹತ್​ ಸೆಟ್​ ಮತ್ತು ಅದ್ಧೂರಿ ಮೇಕಿಂಗ್‌ನಿಂದಾಗಿ ಈ ಹಾಡು ಟಾಲಿವುಡ್ ಸಿನಿಮಂದಿಯ ಗಮನ ಸೆಳೆಯುತ್ತಿದೆ. ಜೊತೆಗೆ ಶ್ರೀಮುರಳಿ ಮಾಸ್‌ ಲುಕ್‌ನಲ್ಲಿ ಸ್ಟೆಪ್ಸ್ ಹಾಕಿದ್ದಾರೆ. 

ರೋರಿಂಗ್ ಸ್ಟಾರ್ ಶ್ರೀಮುರಳಿ (SriiMurali) ಅಭಿನಯದ ಹಾಗೂ ಮಹೇಶ್ ಕುಮಾರ್ (Mahesh Kumar) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಮದಗಜ' (Madhagaja) ಸಿನಿಮಾದ ತೆಲುಗು ಟೈಟಲ್ ಸಾಂಗ್ (Title Song) ಬಿಡುಗಡೆಯಾಗಿದ್ದು, ಬೃಹತ್​ ಸೆಟ್​ ಮತ್ತು ಅದ್ಧೂರಿ ಮೇಕಿಂಗ್‌ನಿಂದಾಗಿ ಈ ಹಾಡು ಟಾಲಿವುಡ್ ಸಿನಿಮಂದಿಯ ಗಮನ ಸೆಳೆಯುತ್ತಿದೆ. ಜೊತೆಗೆ ಶ್ರೀಮುರಳಿ ಮಾಸ್‌ ಲುಕ್‌ನಲ್ಲಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿಗೆ ಕಿನ್ನಲ್ ರಾಜ್ ಸಾಹಿತ್ಯವಿದ್ದು, ಸಂತೋಷ್ ವೆಂಕಿ ಹಾಡಿದ್ದಾರೆ. 'ಕೆಜಿಎಫ್' (KGF) ಖ್ಯಾತಿಯ ರವಿ ಬಸ್ರೂರು (Ravi Basrur) ಸಂಗೀತ ನೀಡಿದ್ದು, ಸಿನಿರಸಿಕರು ಹಾಡಿಗೆ ಕೂಡಾ ಫಿದಾ ಆಗಿದ್ದಾರೆ.

Madhagaja: ಚಿತ್ರ ನೋಡಲು ರಜೆ ನೀಡುವಂತೆ ಪತ್ರ ಬರೆದ ಶ್ರೀಮುರಳಿ ಅಭಿಮಾನಿ

ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ (Umapathy Srinivas Gowda) ನಿರ್ಮಾಣ ಮಾಡುತ್ತಿದ್ದು, ಅಯೋಗ್ಯ (Ayogya) ಸಿನಿಮಾ ಖ್ಯಾತಿಯ ಎಸ್.ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಹರೀಶ್ ಕೊಮ್ಮೆಯವರ ಸಂಕಲನವಿರುವ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು ನಟಿಸಿದ್ದು, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ. ವಾರಾಣಸಿ ಗ್ಯಾಂಗ್‌ಸ್ಟರ್‌ (Gangster) ಆಗಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. ಕನ್ನಡ ,ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ 'ಮದಗಜ' ಸಿನಿಮಾ ಬಿಡುಗಡೆಯಾಗಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories