ಮುದ್ದಿನ ತಮ್ಮನ ನೆನೆದು ವೇದಿಕೆಯಲ್ಲಿ ಕಣ್ಣೀರಿಟ್ಟ ಶಿವಣ್ಣ, ರಾಘಣ್ಣ

ಪುನೀತ್ ರಾಜ್‌ಕುಮಾರ್(Puneeth Rajkumar) ನುಡಿನಮನ ಕಾರ್ಯಕ್ರಮದಲ್ಲಿ ಸಹೋದರರಾದ ಶಿವರಾಜ್‌ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ತಮ್ಮ ಮುದ್ದಿನ ತಮ್ಮನ ನೆನೆಸಿ ಕಣ್ಣೀರಿಟ್ಟಿದ್ದಾರೆ.

First Published Nov 17, 2021, 2:06 PM IST | Last Updated Nov 17, 2021, 2:06 PM IST

ಪುನೀತ್ ರಾಜ್‌ಕುಮಾರ್(Puneeth Rajkumar) ನುಡಿನಮನ ಕಾರ್ಯಕ್ರಮದಲ್ಲಿ ಸಹೋದರರಾದ ಶಿವರಾಜ್‌ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ತಮ್ಮ ಮುದ್ದಿನ ತಮ್ಮನ ನೆನೆಸಿ ಕಣ್ಣೀರಿಟ್ಟಿದ್ದಾರೆ. ಪ್ರೀತಿಯ ತಮ್ಮನ ಕಳೆದುಕೊಂಡ ನೋವಲ್ಲಿ ಕಣ್ಣೀರು ಹಾಕಿದ ರಾಘವೇಂದ್ರ ರಾಜ್‌ಕುಮಾರ್(Raghavendra Rajkumar) ಅವರು ನನ್ನ ಆಯಸ್ಸು ಅವನಿಗೆ ಕೊಡುತ್ತೇನೆ ಎಂದಿದ್ದೆ, ಅವನ ಆಯಸ್ಸು ನನಗೆ ಕೊಟ್ಟು ಹೋದ. ಅವನನ್ನು ಕಳುಹಿಸುವ ದಿನ ನಮಗೆ ಬೇಕಿತ್ತಾ ಎಂದು ಕಣ್ಣೀರಿಟ್ಟಿದ್ದಾರೆ ರಾಘವೇಂದ್ರ ರಾಜ್‌ಕುಮಾರ್.

ಮುತ್ತುರಾಜನ ಹಾದಿಯಲ್ಲಿಯೇ ನಡೆದ ಅಪ್ಪು: ಪುನೀತ್ ರಾಜ್‌ಕುಮಾರ್ ಇನ್ನು ಕರ್ನಾಟಕ ರತ್ನ

ಶಿವರಾಜ್‌ ಕುಮಾರ್ ಅವರು ತಮ್ಮನ ಕುರಿತು ಮಾತನಾಡಿ, ಅವನಿಗೆ ನನ್ನ ಕಣ್ಣೇ ಬಿತ್ತೇನೋ.. ಅಷ್ಟು ಅವನ ಬಗ್ಗೆ ಮಾತನಾಡುತ್ತಿದೆ. ಎಲ್ಲರೂ ಬಂದಿರುವ, ಬೆಂಬಲ ಕೊಟ್ಟಿರುವುದನ್ನು ಎಂದಿಗೂ ಮರೆಯುವುದಿಲ್ಲ, ವಿಶಾಲ್ ಅವರನ್ನು ನೋಡಿದಾಗ ನನಗೆ ಪುನೀತ್‌ನನ್ನು ನೋಡಿದಂತೆಯೇ ಆಗುತ್ತದೆ ಎಂದಿದ್ದಾರೆ.