Asianet Suvarna News Asianet Suvarna News

Arjun Gowda: ಕೋಟಿ ರಾಮು ಚಿತ್ರಕ್ಕೆ ಸ್ಯಾಂಡಲ್‌ವುಡ್ ದಿಗ್ಗಜರ ಸಾಥ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಜೊತೆಯಾಗಿ ನಟಿಸಿರುವ 'ಅರ್ಜುನ್ ಗೌಡ'  ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ನಿರ್ಮಾಪಕ ರಾಮು ಈ ಚಿತ್ರದ ಮೇಲೆ ದೊಡ್ಡ ಕನಸು ಕಂಡಿದ್ದರು. 

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ಪ್ರಿಯಾಂಕಾ ತಿಮ್ಮೇಶ್ (Priyanka Thimmesh) ಜೊತೆಯಾಗಿ ನಟಿಸಿರುವ 'ಅರ್ಜುನ್ ಗೌಡ' (Arjun Gowda) ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ನಿರ್ಮಾಪಕ ರಾಮು (Ramu) ಈ ಚಿತ್ರದ ಮೇಲೆ ದೊಡ್ಡ ಕನಸು ಕಂಡಿದ್ದರು. ಅದರಂತೆ ಆ ಚಿತ್ರವನ್ನು ನಿರ್ಮಿಸಿದ್ದರು ಕೂಡಾ. ಚಿತ್ರದ ಬಿಡುಗಡೆಯನ್ನು ಕೂಡಾ ಅದ್ಧೂರಿಯಾಗಿ ಮಾಡುವ ಯೋಚನೆ ಅವರಿಗಿತ್ತು. ಆದರೆ, ಅವರ ಕನಸು ಈಡೇರುವ ಮುನ್ನವೇ ರಾಮು ಕೋವಿಡ್‌ಗೆ ಬಲಿಯಾದರು. ಆದರೆ, ಅವರ ಪತ್ನಿ ಮಾಲಾಶ್ರೀ (Malashree) ಪತಿಯ ಆಸೆಯನ್ನು ಪೂರೈಸಲು ಮುಂದಾಗಿದ್ದಾರೆ. 

Interview With Malashree: ಪತಿಯ ಚಿತ್ರ ನಿರ್ಮಾಣ ಉತ್ಸಾಹವನ್ನು ನೆನಪಿಸಿಕೊಂಡ ಕನಸಿನ ರಾಣಿ

ಇತ್ತೀಚೆಗಷ್ಟೇ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು. ರಾಮು ಕನಸಿನ ಸಿನಿಮಾದ ಬಿಡುಗಡೆಗೆ ಅವರ ಬ್ಯಾನರ್‌ನಲ್ಲಿ ಕೆಲಸ ಮಾಡಿದ ಅನೇಕ ಕಲಾವಿದರು ಸಾಥ್‌ ನೀಡಿದರು. ದೇವರಾಜ್‌, ರವಿಚಂದ್ರನ್‌, ಶಿವರಾಜ್‌ಕುಮಾರ್‌, ಉಪೇಂದ್ರ, ಗಣೇಶ್‌, ಕೃಷ್ಣ, ಸಾಧು ಕೋಕಿಲಾ, ಪ್ರಜ್ವಲ್‌ ದೇವರಾಜ್‌ ಸೇರಿದಂತೆ  ಅನೇಕ ನಟರು 'ಅರ್ಜುನ್‌ ಗೌಡ' ಚಿತ್ರಕ್ಕೆ ಸಾಥ್‌ ನೀಡಿದರು. ಎಲ್ಲರೂ ರಾಮು ಅವರ ಸಿನಿಮಾ ಪ್ರೀತಿ, ಅವರ ಬ್ಯಾನರ್‌ನಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಂಡು ಭಾವುಕರಾದರು. ಮಾಲಾಶ್ರೀ ಕೂಡಾ ಪತಿಯ ಸಿನಿಮಾ ಕನಸಿನ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದರು. ಈ ಚಿತ್ರವನ್ನು ಲಕ್ಕಿ ಶಂಕರ್‌ (Shankar) ನಿರ್ದೇಶಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories