Asianet Suvarna News Asianet Suvarna News

ಕಾಂತಾರ-2 ಬರುವುದು ಫಿಕ್ಸ್: ವಿಜಯ್ ಕಿರಗಂದೂರು ಹೇಳಿದ್ದೇನು?

ನಿರ್ಮಾಪಕ ವಿಜಯ್ ಕಿರಗಂದೂರು ಕಾಂತಾರ ಪಾರ್ಟ್-2 ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದು, ಇದೀಗ ಕಾಡುಬೆಟ್ಟ ಶಿವನ ಕಾಂತಾರ ಕೆಲಸ ಮತ್ತೆ ಶುರುವಾಗಿದೆ. 
 

First Published Jan 23, 2023, 5:48 PM IST | Last Updated Jan 23, 2023, 5:48 PM IST

ಇಂಗ್ಲೀಷ್ ಪತ್ರಿಕೆಯೊಂದಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ನೀಡಿರೋ ಸಂದರ್ಶನದಲ್ಲಿ ಕಾಂತಾರ ಪಾರ್ಟ್-2 ಬರೋದು ನಿಜ ಎಂದಿದ್ದಾರೆ. ಕಾಡುಬೆಟ್ಟದ ಶಿವ ರಿಷಬ್ ಶೆಟ್ಟಿ ಕಾಂತಾರ-2 ಕತೆ ಬರೆಯುತ್ತಿದ್ದಾರೆ. ತನ್ನ ಟೀಂ ಜೊತೆ ಕರ್ನಾಟಕ ಕರಾವಳಿ ಕಾಡಿನ ಒಳಗೆ ವಾಸ್ತವ್ಯ ಹೂಡಿರೋ ಶೆಟ್ರು, ಕಾಂತಾರ-2 ಸ್ಟೋರಿಗೆ ಬೇಕಾದ ಎಲ್ಲಾ ಮಾಹಿತಿ ಕಲೆ ಹಾಕುತ್ತಾ ಕಥೆ ಫಾರ್ಮ್ ಮಾಡುತ್ತಿದ್ದಾರೆ ಅಂತ ಅವರು  ಹೇಳಿದ್ದಾರೆ. 
ಕಾಂತಾರ 2 ಚಿತ್ರದ ಕೆಲವು ದೃಶ್ಯಗಳನ್ನ ಮಳೆಗಾಲದಲ್ಲಿ ಶೂಟಿಂಗ್ ಮಾಡೋದಕ್ಕೆ ಶೆಟ್ರು ಪ್ಲಾನ್ ಮಾಡಿದ್ದಾರೆ. 2024ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಕಾಂತಾರ-2 ಪ್ಯಾನ್ ಇಂಡಿಯಾ ಬಿಡುಗಡೆ ಮಾಡುವುದು ನಮ್ಮ ಗುರಿ ಅಂತ ವಿಜಯ್ ಕಿರಗಂದೂರು ಹೇಳಿದ್ದಾರೆ. 

Video Top Stories