Asianet Suvarna News Asianet Suvarna News

Premam Poojyam: 'ನೆನಪಿರಲಿ ಪ್ರೇಮ್' ಪ್ರೀತಿಯ ಜ್ವರದಲ್ಲಿ ಮಿಂದೆದ್ದ ಪ್ರೇಕ್ಷಕರು

ಪ್ರೇಮಂ ಪೂಜ್ಯಂ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಒಳ್ಳೆಯ ವಿಮರ್ಶೆಯನ್ನು ಪಡೆದುಕೊಳ್ಳುತ್ತಿದೆ. ಚಳಿ ಮಳೆಯನ್ನೂ ಲೆಕ್ಕಿಸದೆ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬಂದು ಚಿತ್ರವನ್ನು ಕಣ್ತುಂಬಿಕೊಂಡು ಪ್ರೇಮ ಜ್ವರವನ್ನು ಬರಿಸಿಕೊಳ್ಳುತ್ತಿದ್ದಾರೆ. 

ನೆನಪಿರಲಿ ಪ್ರೇಮ್ (Prem) ಅಭಿನಯದ 25ನೇ ಚಿತ್ರ 'ಪ್ರೇಮಂ ಪೂಜ್ಯಂ' (Premam Poojyam) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಒಳ್ಳೆಯ ವಿಮರ್ಶೆಯನ್ನು ಪಡೆದುಕೊಳ್ಳುತ್ತಿದೆ. ಚಳಿ ಮಳೆಯನ್ನೂ ಲೆಕ್ಕಿಸದೆ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬಂದು ಚಿತ್ರವನ್ನು ಕಣ್ತುಂಬಿಕೊಂಡು ಪ್ರೇಮ ಜ್ವರವನ್ನು ಬರಿಸಿಕೊಳ್ಳುತ್ತಿದ್ದಾರೆ. ಚಿತ್ರದ ಲವ್ ಸ್ಟೋರಿ, ಹಾಡುಗಳು, ಡೈಲಾಗ್‌ಗಳು ಸೇರಿದಂತೆ ಸಿನಿಮಾಟೋಗ್ರಾಫಿಗೆ ಸಿನಿರಸಿಕರು ಬೊಂಬಾಟ್ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

Lovely Star Prem: ಪುನೀತ್ ಸ್ನೇಹಕ್ಕೆ 'ಪ್ರೇಮಂ ಪೂಜ್ಯಂ' ಅರ್ಪಣೆ

'ಪ್ರೇಮಂ ಪೂಜ್ಯಂ' ಚಿತ್ರವನ್ನು ವೀಕ್ಷಿಸಿ ಮಾತನಾಡಿದ ಪ್ರೇಮ್, ಚಿತ್ರ ಯಾವ ರೀತಿ ಮೂಡಿಬಂದಿದೆ ಎಂಬುದು ಅಭಿಮಾನಿಗಳ ಜೊತೆ ಕೂತು ನೋಡಿದ ಮೇಲೆ ಗೊತ್ತಾಗುವುದು ಹಾಗೂ ಇವರಿಗೆಲ್ಲ ಚಿತ್ರ ಇಷ್ಟವಾದರೆ ಚಿತ್ರ ಯಶಸ್ವಿಯಾಗುತ್ತೆ ಎಂದು ಹೇಳಿದರು. ಜೊತೆಗೆ ನಾಯಕಿ ಬೃಂದಾ ಆಚಾರ್ಯ ಕೂಡಾ ಚಿತ್ರದ ಬಗ್ಗೆ ಮಾತನಾಡಿದರು. ಇನ್ನು ಚಿತ್ರದಲ್ಲಿ ಐಂದ್ರಿತಾ ರೇ , ಸುಮನ್, ಮಾಸ್ಟರ್ ಆನಂದ್, ಸಾಧು ಕೋಕಿಲಾ, ಅನು ಪ್ರಭಾಕರ್, ತಪಸ್ವಿನಿ ಸೇರಿದಂತೆ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories