Asianet Suvarna News Asianet Suvarna News

2ನೇ ವಾರವೂ ಸಕ್ಸಸ್‌ಫುಲ್ ಜರ್ನಿಯಲ್ಲಿ ಕಾಟೇರ: ದರ್ಶನ್ ನಟನೆಯ ಸಿನಿಮಾ ಗಳಿಸಿದ್ದೆಷ್ಟು ಕೋಟಿ?

ನಟ ನಿರ್ದೇಶಕ ತರುಣ್ ಸುದೀರ್ ಮತ್ತು ನಟ ದರ್ಶನ್ ಜೋಡಿ ಮತ್ತೊಂದು ರೆಕಾರ್ಡ್ ಬರೆದಿದ್ದಾರೆ. ಚೌಕ, ರಾಬರ್ಟ್ ಬಳಿಕ ಕಾಟೇರ ಸಿನಿಮಾ ಮೂಲಕ ಮತ್ತೊಂದು ಬಿಗ್ ಹಿಟ್ ಮೂವಿ ಕೊಟ್ಟಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ಎರಡನೇ ವಾರವೂ ಸಕ್ಸಸ್ಫುಲ್ ಜರ್ನಿ ಮುಂದುವರೆಸಿದ್ದು ಗಲ್ಲಾಪಟ್ಟೆಗೆಯಲ್ಲಿ ಇತಿಹಾಸ ಸೃಷ್ಟಿಸಿದೆ. 

ನಟ ನಿರ್ದೇಶಕ ತರುಣ್ ಸುದೀರ್ ಮತ್ತು ನಟ ದರ್ಶನ್ ಜೋಡಿ ಮತ್ತೊಂದು ರೆಕಾರ್ಡ್ ಬರೆದಿದ್ದಾರೆ. ಚೌಕ, ರಾಬರ್ಟ್ ಬಳಿಕ ಕಾಟೇರ ಸಿನಿಮಾ ಮೂಲಕ ಮತ್ತೊಂದು ಬಿಗ್ ಹಿಟ್ ಮೂವಿ ಕೊಟ್ಟಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ಎರಡನೇ ವಾರವೂ ಸಕ್ಸಸ್ಫುಲ್ ಜರ್ನಿ ಮುಂದುವರೆಸಿದ್ದು ಗಲ್ಲಾಪಟ್ಟೆಗೆಯಲ್ಲಿ ಇತಿಹಾಸ ಸೃಷ್ಟಿಸಿದೆ. ನಟ ದರ್ಶನ್ ಸಿನಿ ಕರಿಯರ್ನಲ್ಲೇ ಕಾಟೇರ ಸಿನಿಮಾ ಒಂದು ಇತಿಹಾಸ. ಈ ಸಿನಿಮಾ ಒಂದೇ ವಾರದಲ್ಲಿ 75 ಕೋಟಿ ಕ್ಲಬ್ ಸೇರಿತ್ತು. ಕಾಟೇರ ತೆರೆ ಕಂಡಿದ್ದು ಕಳೆದ ವರ್ಷ  ಡಿಸೆಂಬರ್ 29ಕ್ಕೆ. ಈ ಸಿನಿಮಾ ರಿಲೀಸ್ ಆಗಿ 15 ದಿನ ಆಗಿದೆ.

ಈ 15 ದಿನದಲ್ಲಿ ಕಾಟೇರಗೆ ಸಿಕ್ಕ ಜನ ಮನ್ನಣೆಗೆ ಬರೋಬ್ಬರಿ 150 ಕೋಟಿ ಕಲೆಕ್ಷನ್ ಮಾಡಿದೆ ಅಂತ ಚಿತ್ರತಂಡದ ಆಪ್ತ ಬಳಗ ಹೇಳುತ್ತಿದ್ದಾರೆ. ಈ ವಾರದಿಂದ ಸ್ಯಾಂಡಲ್ವುಡ್ನಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಇದೆ. ಈ ಭಾರಿ ಸಂಕ್ರಾಂತಿ ಹಬ್ಬಕ್ಕೆ ಕನ್ನಡದ ಒಂದೇ ಒಂದು ಸಿನಿಮಾ ರಿಲೀಸ್ ಆಗಿಲ್ಲ. ಆದ್ರೆ ತಮಿಳಿನಿಂದ ಕ್ಯಾಪ್ಟನ್ ಮಿಲ್ಲರ್, ತೆಲುಗುನಲ್ಲಿ ಗುಂಟೂರು ಕಾರಂ, ಅಯಾಲನ್, ಹಿಂದಿಯಲ್ಲಿ ಮೆರ್ರಿ ಕ್ರಿಸ್ಮಸ್, ಹನು ಮಾನ್ ಸೇರಿ ಒಟ್ಟು ಏಳು ಸಿನಿಮಾಗಳು ರಿಲೀಸ್ ಆಗಿವೆ. ಈ ಪರಭಾಷಾ ಸಿನಿಮಾಗಳ ಮಧ್ಯೆಯೂ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನ ಕರೆತರುವಲ್ಲಿ ಕಾಟೇರ ಗೆದ್ದಿದ್ದಾನೆ. ಹೀಗಾಗೆ ಕಾಟೇರ ರಿಲೀಸ್ ಆಗಿ ಎರಡು ವಾರ ಕಳೆದರೂ ರನ್ನಿಂಗ್ ಸಕ್ಸಸ್ಫುಲ್ ಆಗ್ತಿದೆ. 

Video Top Stories