Asianet Suvarna News Asianet Suvarna News

ಡೆವಿಲ್​ ಸಿನಿಮಾಗೆ ವಿಲನ್ ಮಹೇಶ್​ ಮಂಜ್ರೇಕರ್: ದರ್ಶನ್​​ ಚಿತ್ರದಲ್ಲಿರುತ್ತಾರೆ ಪರಭಾಷಾ ವಿಲನ್​ಗಳು!

ಕನ್ನಡದ ಸ್ಟಾರ್ಸ್​ ಸಿನಿಮಾಗಳಲ್ಲಿ ಪರಭಾಷಾ ವಿಲನ್​ಗಳು ಬರ್ತಾ ಇರ್ತಾರೆ ಹೋಗ್ತಾ ಇರ್ತಾರೆ. ಇದೀಗ ಬಾಲಿವುಡ್​ನ ಸ್ಟಾರ್ ವಿಲನ್​​ ಮಹೇಶ್ ಮಂಜ್ರೇಕರ್​ ಮತ್ತೆ ಕನ್ನಡದಕ್ಕೆ ಬಂದಿದ್ದಾರೆ. ಅದು ನಟ ದರ್ಶನ್ ಸಿನಿಮಾದಲ್ಲಿ.

ಸ್ಯಾಂಡಲ್​ವುಡ್​​ನಲ್ಲಿ ವಿಲನ್​ಗಳಿಗೆ ಬರ ಇದೆ. ಆರುಮುಗಂ ರವಿಶಂಕರ್​ ಹೊರತುಪಡಿಸಿದ್ರೆ ಮತ್ತಿನ್ಯಾರು ಪ್ರಾಮಿಸಿಂಗ್ ಆಗಿ ಕಾಣಿಸಿಲ್ಲ. ಹಾಗಂತ ಎಲ್ಲಾ ಸಿನಿಮಾದಲ್ಲೂ ರವಿಶಂಕರ್ ಅವರೇ ಖಳನಾಯಕನಾಗಿ ಇರೋಕೆ ಆಗೋದಿಲ್ವಲ್ಲ. ಹೀಗಾಗಿ ಕನ್ನಡದ ಸ್ಟಾರ್ಸ್​ ಸಿನಿಮಾಗಳಲ್ಲಿ ಪರಭಾಷಾ ವಿಲನ್​ಗಳು ಬರ್ತಾ ಇರ್ತಾರೆ ಹೋಗ್ತಾ ಇರ್ತಾರೆ. ಇದೀಗ ಬಾಲಿವುಡ್​ನ ಸ್ಟಾರ್ ವಿಲನ್​​ ಮಹೇಶ್ ಮಂಜ್ರೇಕರ್​ ಮತ್ತೆ ಕನ್ನಡದಕ್ಕೆ ಬಂದಿದ್ದಾರೆ. ಅದು ನಟ ದರ್ಶನ್ ಸಿನಿಮಾದಲ್ಲಿ. ಡೆವಿಲ್.. ಸಧ್ಯ ನಟ ದರ್ಶನ್ ಅಭಿಮಾನಿಗಳು ಕಾಯುತ್ತಿರೋ ಸಿನಿಮಾ. ಮಿಲನಾ ಪ್ರಕಾಶ್​ ನಿರ್ದೇಶನದ ಜೊತೆ ನಿರ್ಮಾಣ ಕೂಡ ಮಾಡುತ್ತಿರೋ ಡೆವಿಲ್​ನಲ್ಲಿ ದರ್ಶನ್​​ ಅಬ್ಬರ ಹೇಗಿರುತ್ತೆ ಅಂತ ಸಣ್ಣ ಝಲಕ್ ತೋರಿಸಿದ್ದಾರೆ. 

ಇದೀಗ ದರ್ಶನ್​ ನಟನೆಯ ಡೆವಿಲ್​​ಗೆ ಖಳನಾಯಕನಾಗಿ ಬಾಲಿವುಡ್​ನ ಸ್ಟಾರ್​ ವಿಲನ್ ಮಹೇಶ್ ಮಂಜ್ರೇಕರ್​​ ಎಂಟ್ರಿ ಕೊಟ್ಟಿದ್ದಾರೆ. 2005ರಲ್ಲಿ ಎನ್‌ಕೌಂಟರ್ ದಯಾ ನಾಯಕ್ ಅನ್ನೋ ಸಿನಿಮಾ ಬಂದಿತ್ತು. ಇದರಲ್ಲಿ ಯೂಸುಫ್ ಖಲೀಲ್ ಅನ್ನೋ ಪಾತ್ರ ಮಾಡಿದ್ರಿ ಮಹೇಶ್​ ಮಂಜ್ರೇಕರ್​​. ಇದಾದ್ಮೇಲೆ ಕನ್ನಡದ ಯಾವ ಚಿತ್ರದಲ್ಲೂ ಮಹೇಶ್ ಮಂಜ್ರೇಕರ್ ಕಾಣಿಸಿಕೊಳ್ಳಲಿಲ್ಲ. ಈಗ ಮತ್ತೆ ದರ್ಶನ್​​​ರ ಡೆವಿಲ್ ಮೂಲಕ ವಿಲನ್ ಆಗಿದ್ದಾರೆ. ನಟ ದರ್ಶನ್ ಸಿನಿಮಾಗಳಲ್ಲಿ ಕನ್ನಡ ಕಲಾವಿಧರದ್ದೇ ಸಿಂಹಪಾಲು. ಆದ್ರೆ ದರ್ಶನ್​​ನ ಹಿಟ್​ ಸಿನಿಮಾಗಳು ಎನಿಸಿಕೊಂಡ ಚಿತ್ರಗಳಲ್ಲಿ ಸ್ಟ್ರಾಂಗ್ ವಿಲನ್​ಗಳಾಗಿ ಪರಭಾಷಾ ಖಳನಟರೇ ಹೆಚ್ಚು ಮಿಂಚಿದ್ದಾರೆ. 

ರಾಬರ್ಟ್​ ಹಾಗು ಕಾಟೇರ ಸಿನಿಮಾದಲ್ಲಿ ಜಗಪತಿ ಬಾಬಾ ನಟಿಸಿದ್ರು. ಅಷ್ಟೆ ಅಲ್ಲ ರಾಬರ್ಟ್​ನಲ್ಲಿ ಬಹುಭಾಷಾ ನಟ ರವಿ ಕಿಶನ್​ ಕೂಡ ಬಣ್ಣ ಹಚ್ಚಿದ್ದಾರೆ. ಇನ್ನು ಯಜಮಾನ ಸಿನಿಮಾದಲ್ಲಿ ಬಾಲಿವುನ ಟಾಕೂರ್ ಅನೂಪ್​ ಸಿಂಗ್​ ವಿಲನ್ ಆಗಿದ್ರು, ಜಾಗೆ ಜಗ ಸಿನಿಮಾದಲ್ಲಿ ಬಹುಭಾಷ ನಟ ಪ್ರದೀಪ್ ರಾವತ್​ ಖಳನಟನಾಗಿ ದರ್ಶನ್ ಎದುರು ಮಿಂಚಿದ್ರು. ವಿಶೇಷ ಅಂದ್ರೆ ಪರಭಾಷಾ ಖಳನಟರು ನಟಿಸಿರೋ ದರ್ಶನ್​ ಸಿನಿಮಾಗಳೆಲ್ಲಾ ಹಿಟ್ ಕೂಡ ಆಗಿವೆ. ಈಗ ಡೆವಿಲ್​​ ಸಿನಿಮಾದಲ್ಲಿ ಮಹೇಶ್ ಮಂಜ್ರೇಕರ್ ಬಂದಿಂದಿದ್ದಾರೆ. ಸಧ್ಯ ಡೆವಿಲ್ ಸಿನಿಮಾದ ಟಾಕಿ ಪೋಷನ್ ಶೂಟಿಂಗ್ ನಡೆಯುತ್ತಿದೆ. 

Video Top Stories