ಕಾಂಗ್ರೆಸ್ ಪತ್ರ ಸಮರ: ಗುರುವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಏನೆಲ್ಲಾ ಚರ್ಚೆ ನಡೀತು..?
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಶಾಸಕ ಬಿ.ಆರ್.ಪಾಟೀಲ್ ಪತ್ರ ಬಾಂಬ್ ಕಂಪನ ಎಬ್ಬಿಸಿತ್ತು. ಸಚಿವರ ವಿರುದ್ಧವೇ ಆರೋಪ ಮಾಡಿ ಸಿಎಂಗೆ ಪತ್ರ ಬರೆಯಲಾಗಿತ್ತು. ಹಲವು ಶಾಸಕರ ಸಹಿಯುಳ್ಳ ಈ ಪತ್ರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಬೆಂಗಳೂರು (ಜು.28): ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಶಾಸಕ ಬಿ.ಆರ್.ಪಾಟೀಲ್ ಪತ್ರ ಬಾಂಬ್ ಕಂಪನ ಎಬ್ಬಿಸಿತ್ತು. ಸಚಿವರ ವಿರುದ್ಧವೇ ಆರೋಪ ಮಾಡಿ ಸಿಎಂಗೆ ಪತ್ರ ಬರೆಯಲಾಗಿತ್ತು. ಹಲವು ಶಾಸಕರ ಸಹಿಯುಳ್ಳ ಈ ಪತ್ರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಿ.ಆರ್.ಪಾಟೀಲ್ ಲೆಟರ್ ಹೆಡ್‌ನಲ್ಲಿ ಪತ್ರ ವೈರಲ್ ಆಗಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಬಿ.ಆರ್.ಪಾಟೀಲ್ ನಡೆಗೆ ಗರಂ ಆದ್ರೂ ಎನ್ನಲಾಗಿದೆ. ಪತ್ರ ಬರೆಯೋ ಬದಲು ನೇರವಾಗಿ ಬಂದು ಮಾತನಾಡಿದ್ರೆ ಕೆಲ್ಸ ಆಗ್ತಿತ್ತು ಅಂತೇಳಿದ್ರು. ಈ ವೇಳೆ ಸ್ವಲ್ಪ ಕೋಪದಲ್ಲಿ ವೇದಿಕೆ ಮುಂದೆ ಬಂದು ಪ್ರತಿಕ್ರಿಯಿಸಿದ ಬಿ.ಆರ್.ಪಾಟೀಲ್, ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಡಿ.. ಸದುದ್ದೇಶದಿಂದ ಪತ್ರ ಬರೆದಿದ್ದೇನೆ, ಸಚಿವರು ನಮಗೆ ಗೌರವ ಕೊಡಬೇಕು ಅಂತೇಳಿದ್ರು. ಹೀಗಾದರೆ ಸರಿಯಲ್ಲ, ಅದಕ್ಕೆ ಪತ್ರ ಬರೆದಿದ್ದೇನೆ ಅಂತಂದ್ರು.. ಈ ವೇಳೆ ಶರಣಪ್ರಕಾಶ್ ಪಾಟೀಲ್ ಏನಿದೆಯೋ ಅದನ್ನಷ್ಟೇ ಹೇಳಿ ಎಂದು ಕುಳ್ಳಿರಿಸಿದ್ರು ಎನ್ನಲಾಗಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.