Asianet Suvarna News Asianet Suvarna News

ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ : ಅದೇ ಹುಚ್ಚು ಹಿಡಿದಿದೆ

 ಸಿದ್ದರಾಮಯ್ಯ (Siddaramaiah) ಅವರಿಗೆ ಹೇಗಾದರೂ ಸರಿ ಸಿಎಂ ಆಗಬೇಕು ಅನ್ನೋ ಹುಚ್ಚು. ಡಿಕೆ ಶಿವಕುಮಾರ್ ಗೆ (DK Shivakumar) ಬಿಜೆಪಿಯವರನ್ನ (BJP) ಹೇಗಾದರೂ ಎಳೆದುಕೊಳ್ಳಬೇಕು ಅನ್ನೋ ಹುಚ್ಚು‌. ಈ ಎರಡು ಹುಚ್ಚರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಸಚಿವ ಕೆಎಸ್ ಈಶ್ವರಪ್ಪ (KS Eshwarappa) ವಿವಾದಿತ ಹೇಳಿಕೆ ನೀಡಿದ್ದಾರೆ. ಮೈಸೂರು ಭಾಗದಲ್ಲಿ 20ಕ್ಕೂ ಹೆಚ್ಚು ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಮೈಸೂರಿನಲ್ಲಿಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಮೋದಿ ಕಾಂಗ್ರೆಸ್‌ನಿಂದ ಪ್ರಧಾನಿಯಾಗಿದ್ದರೆ ಹಿಂದುಳಿದ ವರ್ಗದ ನಾಯಕರೆನಿಸಿಕೊಳ್ಳುತ್ತಿದ್ದರು

ಡಿಕೆಶಿಗೆ  ಬಿಜೆಪಿಯವರನ್ನು ಸೆಳೆಯುವ ಹುಚ್ಚಾದರೆ ಸಿದ್ದರಾಮಯ್ಯ ಸಿಎಂ ಅಗುವ ಹುಚ್ಚಿದೆ. ಇದಕ್ಕೆ ಬೇರೆ ಏನು ಉತ್ತರ ಇಲ್ಲ ಎಂದು ಈಶ್ವರಪ್ಪ ಹೇಳಿದರು.  ಕೆಲವರಿಗೆ ಎಂಎಲ್ಎ (MLA) ಸೀಟ್ ಸಿಗಲಿಲ್ಲ,  ಟಿಕೆಟ್ ಸಿಗಲಿಲ್ಲ ಅನ್ನೋ ಹುಚ್ಚು, ಸಿದ್ದರಾಮಯ್ಯರಿಗೆ ಮುಖ್ಯಮಂತ್ರಿ ಸ್ಥಾನದ ಹುಚ್ಚು ಕನಸು. ಮುಂಬರುವ ಚುನಾವಣೆಯಲ್ಲಿ ಗೆಲ್ಲಲಿ.  ಕಳೆದ ಚುನಾವಣೆಯಲ್ಲಿ ಜನ ಯಾಕ್ ಕೈ ಬಿಟ್ರು ನಿಮ್ಮನ್ನ. ಚಾಮುಂಡೇಶ್ವರಿಲಿ ಯಾಕ್ ಸೋತ್ರಿ..? ಅದನ್ನ ಮೊದಲು ಹೇಳಿ ಆಮೇಲೆ ಕನಸು ಕಾಣಿ ಎಂದು ಸಚಿವ ಈಶ್ವರಪ್ಪ ಹೇಳಿದರು.

First Published Oct 3, 2021, 1:56 PM IST | Last Updated Oct 3, 2021, 1:56 PM IST

ಮೈಸೂರು (ಅ.03):  ಸಿದ್ದರಾಮಯ್ಯ (Siddaramaiah) ಅವರಿಗೆ ಹೇಗಾದರೂ ಸರಿ ಸಿಎಂ ಆಗಬೇಕು ಅನ್ನೋ ಹುಚ್ಚು. ಡಿಕೆ ಶಿವಕುಮಾರ್ ಗೆ (DK Shivakumar) ಬಿಜೆಪಿಯವರನ್ನ (BJP) ಹೇಗಾದರೂ ಎಳೆದುಕೊಳ್ಳಬೇಕು ಅನ್ನೋ ಹುಚ್ಚು‌. ಈ ಎರಡು ಹುಚ್ಚರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಸಚಿವ ಕೆಎಸ್ ಈಶ್ವರಪ್ಪ (KS Eshwarappa) ವಿವಾದಿತ ಹೇಳಿಕೆ ನೀಡಿದ್ದಾರೆ.  ಅಲ್ಲದೇ ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ ಎಂದರು.

ಮೋದಿ ಕಾಂಗ್ರೆಸ್‌ನಿಂದ ಪ್ರಧಾನಿಯಾಗಿದ್ದರೆ ಹಿಂದುಳಿದ ವರ್ಗದ ನಾಯಕರೆನಿಸಿಕೊಳ್ಳುತ್ತಿದ್ದರು

ಡಿಕೆಶಿಗೆ  ಬಿಜೆಪಿಯವರನ್ನು ಸೆಳೆಯುವ ಹುಚ್ಚಾದರೆ ಸಿದ್ದರಾಮಯ್ಯ ಸಿಎಂ ಅಗುವ ಹುಚ್ಚಿದೆ. ಇದಕ್ಕೆ ಬೇರೆ ಏನು ಉತ್ತರ ಇಲ್ಲ ಎಂದು ಈಶ್ವರಪ್ಪ ಹೇಳಿದರು.  ಕೆಲವರಿಗೆ ಎಂಎಲ್ಎ (MLA) ಸೀಟ್ ಸಿಗಲಿಲ್ಲ,  ಟಿಕೆಟ್ ಸಿಗಲಿಲ್ಲ ಅನ್ನೋ ಹುಚ್ಚು, ಸಿದ್ದರಾಮಯ್ಯರಿಗೆ ಮುಖ್ಯಮಂತ್ರಿ ಸ್ಥಾನದ ಹುಚ್ಚು ಕನಸು. ಮುಂಬರುವ ಚುನಾವಣೆಯಲ್ಲಿ ಗೆಲ್ಲಲಿ.  ಕಳೆದ ಚುನಾವಣೆಯಲ್ಲಿ ಜನ ಯಾಕ್ ಕೈ ಬಿಟ್ರು ನಿಮ್ಮನ್ನ. ಚಾಮುಂಡೇಶ್ವರಿಲಿ ಯಾಕ್ ಸೋತ್ರಿ..? ಅದನ್ನ ಮೊದಲು ಹೇಳಿ ಆಮೇಲೆ ಕನಸು ಕಾಣಿ ಎಂದು ಸಚಿವ ಈಶ್ವರಪ್ಪ ಹೇಳಿದರು.

Video Top Stories