ಜಾತಿ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ: ಕೋಲಾರ & ವರುಣಾದಿಂದ ಸ್ಪರ್ಧೆ?

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಕುರಿತು ಹೊಸ ಚರ್ಚೆ ಶುರುವಾಗಿದೆ.

First Published Nov 13, 2022, 3:57 PM IST | Last Updated Nov 13, 2022, 3:57 PM IST

ಬಾದಾಮಿಗೆ ಗುಡ್‌ ಬೈ ಹೇಳಿ ಸಿದ್ದರಾಮಯ್ಯ ಎಲ್ಲಿಂದ ಕಣಕ್ಕೆ ಇಳಿಯುತ್ತಾರೆ ಎಂಬ ಚರ್ಚೆ ನಡೆದಿದೆ. ಈ ನಡುವೆ ಜಾತಿ ಲೆಕ್ಕಾಚಾರದ ಕಾರಣದಿಂದ ಸ್ಪರ್ಧೆ ಕುರಿತು ಅವರು ಹೊಸ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಕುರುಬ, ಮುಸ್ಲಿಂ ಹಾಗೂ ಒಕ್ಕಲಿಗ ಮತ ಕ್ರೋಢೀಕರಣವಾದ್ರೆ ಗೆಲುವು ಎಂಬ ಲೆಕ್ಕಾಚಾರದಲ್ಲಿ ಕೋಲಾರ ಹಾಗೂ ವರುಣದಿಂದ ಸಿದ್ದು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಖಾಸಗಿ ಸರ್ವೆ ಮಾಡಿಸಿದ್ದು, ಎರಡು ಪ್ರಮುಖ ಸಮುದಾಯಗಳು ಬೆಂಬಲಿಸಿದ ಅಭ್ಯರ್ಥಿಗೆ ಗೆಲುವು ಎಂಬ ಮಾಹಿತಿ ಲಭ್ಯವಾಗಿದೆ. ಕುರುಬ ಮತ್ತು ಮುಸ್ಲಿಂ ಮತಗಳನ್ನು ಕ್ರೋಢೀಕರಿಸಿದರೇ ಗೆಲುವು ನಿಶ್ಚಿತ ಎನ್ನಲಾಗಿದ್ದು, ಹೆಚ್ಚು ಮತಗಳುಳ್ಳ ಮುಸ್ಲಿಂರು ಕಾಂಗ್ರೆಸ್‌ ಬೆನ್ನಿಗೆ ನಿಲ್ಲುವ ನಂಬಿಕೆ ಇದೆ.

Channapatna: ಮುನಿದ ಮುಖಂಡರ ಮನೆಯ ಕದ ತಟ್ಟಿದ ಎಚ್‌.ಡಿ.ಕುಮಾರಸ್ವಾಮಿ