Karnataka Politics: ಟಿ.ಡಿ ರಾಜೇಗೌಡ ಖರೀದಿಯ 123 ಕೋಟಿ ಆಸ್ತಿ ಪ್ರಕರಣ: ಆಮಿಷವೊಡ್ಡಿ ಕೇಸ್ ವಾಪಸ್ ತೆಗೆಸಿದ್ರಾ ಶಾಸಕರು?
ಶೃಂಗೇರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಟಿ.ಡಿ ರಾಜೇಗೌಡ ವರ್ಸಸ್ ಮಾಜಿ ಶಾಸಕ ಡಿ.ಎನ್ ಜೀವರಾಜ್ ನಡುವೆ ನಡೆಯುತ್ತಿರುವ ಶೀತಲ ಸಮರ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಖರೀದಿ ಮಾಡಿರುವ 123 ಕೋಟಿ ಆಸ್ತಿ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಶಾಸಕರ ವಿರುದ್ಧ ಲೋಕಾಯುಕ್ತದಲ್ಲಿ ಕೇಸ್ ದಾಖಲು ಮಾಡಿದ ದೂರುದಾರ ವಿಜಯಾನಂದ ಐದೇ ದಿನಕ್ಕೆ ಕೇಸ್ ಹಿಂಪಡೆಯುವ ಮೂಲಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೊಂದು ಆರೋಪ ಹೊರಬರುವ ಮೂಲಕ ಆಸ್ತಿ ಖರೀದಿ ಮಾಡಿರುವ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಕೇಸ್ ಹಿಂಪಡೆಯಲು ಶಾಸಕರ ಆಪ್ತರಿಂದಲೇ ಷಡ್ಯಂತ್ರ ಆರೋಪ ಕೇಳಿ ಬಂದಿದೆ. ವಿಜಯಾನಂದ ಕೇಸ್ ಹಿಂಪಡೆಯಲು ತೆಗೆದ ಬಾಂಡ್ ಪೇಪರ್ನಲ್ಲಿ ಶಾಸಕ ರಾಜೇಗೌಡರ ಸಂಬಂಧಿಯ ಪಿ.ಎ. ಫೋನ್ ನಂಬರ್, ಸಹಿ ಏಕೆ-ಹೇಗೆ ಬಂತು ಎಂದು ಬಿಜೆಪಿ ಮತ್ತೆ ಪ್ರಶ್ನಿಸಿದೆ. ಅಂದರೆ, ಅಲ್ಲಿಗೆ ಶಾಸಕರ ಕಡೆಯವರೇ ಕೇಸ್ ಹಿಂಪಡೆಸಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಸಾಬೀತಾದಂತಿದೆ ಎಂದು ಆರೋಪಿಸಲಾಗಿದೆ.