Asianet Suvarna News Asianet Suvarna News
breaking news image

MLAs Vs Ministers: ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಭೆಯ ಇನ್‌ಸೈಡ್‌ ಡೀಟೆಲ್ಸ್!

ಶಾಸಕಾಂಗ ಸಭೆಯಿಂದ ಹೊರನಡೆಯುತ್ತಿದ್ದ ಶಾಸಕ ಬಿ.ಆರ್. ಪಾಟೀಲರನ್ನು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಮಾಧಾನ ಮಾಡಿ  ಸಭೆಯಲ್ಲಿ ಕೂರಿಸಿದರು. 

ಬೆಂಗಳೂರು (ಜು.28): ಆಳಂದ ಶಾಸಕ ಬಿ.ಆರ್. ಪಾಟೀಲ್‌ ವಿರುದ್ಧ ಟೀಕೆ. ಹಿರಿಯ ನಾಯಕರ ಟೀಕೆಗೆ ಶಾಸಕ ಪಾಟೀಲ್‌ ಬೇಸರವಾಗಿದ್ದಾರೆ. ಇದರಿಂದ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂದು ಪಾಟೀಲ್‌ ಅವರು ಶಾಸಕಾಂಗ ಸಭೆಯಿಂದ ಹೊರನಡೆಯಲು ಪ್ರಯತ್ನ ಮಾಡಿದ್ದಾರೆ. ಇದಾದ ನಂತರ, ಅವರನ್ನು ಸಭೆಯಿಂದ ಹೊರನಡೆಯದಂತೆ ಮನವೊಲಿಸಿ ಸಭೆಯಲ್ಲಿ ಕೂರಿಸಲಾಗಿದೆ. ಶಾಸಕರಾದ ಶರಣಪ್ರಕಾಶ್‌ ಅವರು ಹಾಗೂ ಸಚಿವ ಪ್ರಯಾಂಕ್‌ ಖರ್ಗೆ ಅವರನ್ನು ಸಮಾಧಾನಪಡಿಸಿ ಸಭೆಯಲ್ಲಿ ಕೂರಿಸಿದ್ದಾರೆ. ನಂತರ ಮಧ್ಯ ಪ್ರವೇಶಿಸಿದ ಸಿಎಂ ಸಿದ್ದಾರಾಮಯ್ಯ ಅವರು, 'ಅಪರಾಧಿ ಸ್ಥಾನದಲ್ಲಿ ನಿಮ್ಮನ್ನು ನಿಲ್ಲಿಸಿಲ್ಲ. ಏನೇ ಇದ್ದರೂ ನನಗೆ ಹೇಳಬಹುದಿತ್ತು. ಆಯ್ತು ಬಿಡಪ್ಪ ಎಂದು ಶಾಸಕ ಬಿ.ಆರ್. ಪಾಟೀಲರನ್ನು ಸಮಾಧಾನ ಮಾಡಿದರು.

Video Top Stories