Asianet Suvarna News Asianet Suvarna News

PartyRounds ಹೈಪ್ರೋಫೈಲ್ ಕ್ಷೇತ್ರವಾದ ಮಂಡ್ಯ, ಹೆಚ್‌ಡಿಕೆ, ಸುಮಲತಾ, ರಮ್ಯಾ ಹೆಸರು!

ಇಷ್ಟು ದಿನ ಕೋಲಾರ, ವರುಣ,ಕನಕಪುರ ಸೇರಿದಂತೆ ಕೆಲ ಕ್ಷೇತ್ರಗಳ ಕುತೂಹಲ ಹೆಚ್ಚಾಗಿದೆ. ಇದೀಗ ಮಂಡ್ಯ ಕ್ಷೇತ್ರ ಹೈಪ್ರೋಫೈಲ್ ಆಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಹೆಚ್‌ಡಿ ಕುಮಾರಸ್ವಾಮಿ, ಸುಮಲತಾ ಹಾಗೂ ನಟಿ ರಮ್ಯ.
 

First Published Apr 18, 2023, 9:31 PM IST | Last Updated Apr 18, 2023, 9:31 PM IST

ಹೆಚ್‌ಡಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೆಚ್‌ಡಿಕೆ ಮಂಡ್ಯದಿಂದ ಸ್ಪರ್ಧಿಸಿದರೆ, ಇತ್ತ ಸಂಸದೆ ಸುಮಲತಾರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಟಿ ರಮ್ಯಾಳನ್ನು ಅಖಾಡಕ್ಕಿಳಿಸಲು ಹೊಸ ಪ್ಲಾನ್ ರೆಡಿಮಾಡಿದೆ. ಈ ಮೂಲಕ ಮಂಡ್ಯ ಕ್ಷೇತ್ರ ಇದೀಗ ಹೈಪ್ರೋಫೈಲ್ ಕ್ಷೇತ್ರವಾಗಿ ಮಾರ್ಪಡುವ ಎಲ್ಲಾ ಸಾಧ್ಯತೆ ಕಾಣಿಸುತ್ತಿದೆ.