Asianet Suvarna News Asianet Suvarna News

'ಕೈ' ಛಿದ್ರಗೊಳಿಸಿದ ಶಾಸಕರ 'ಪತ್ರ ಸಮರ'; ಸಚಿವರಿಗೆ ಸಿಎಂ ಸಿದ್ದು ಗುದ್ದು..!

ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಎದ್ದಿದ್ದು, ಆಪರೇಷನ್ ಚರ್ಚೆ ಒಂದು ಕಡೆಯಾದರೆ, ಮತ್ತೊಂದ್ಕಡೆ ಸಚಿವರ ಮೇಲೆ ಶಾಸಕರುಗಳ ಪತ್ರ ಸಮರ ಬಿರುಗಾಳಿ ಎಬ್ಬಿಸಿದೆ. 

ಸಚಿವ ಸಂಪುಟ ಸಭೆ ಹಾಗೂ  ಸಿಎಲ್‌ಪಿ ಸಭೆಯಲ್ಲಿ ಶಾಸಕರ ಪತ್ರ ಸಮರ ಸ್ಫೋಟಗೊಂಡಿದ್ದು, ಕ್ಯಾಬಿನೆಟ್‌ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಬುದ್ದಿವಾದ ಹೇಳಿದ್ದಾರೆ. ಹಾಗೂ ಶಾಸಕರ ಜತೆ ಸರಿಯಾಗಿ ವ್ಯವಹರಿಸುವಂತೆ ಸಚಿವರಿಗೆ ಕಟ್ಟಪ್ಪಣೆ ನೀಡಿದ್ದಾರೆ.ಇನ್ನು ಗ್ಯಾರಂಟಿ ಗೊಂದಲ, ಉಡುಪಿ ಗಲಾಟೆ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಅನ್ನೋ ತಲೆಬಿಸಿ ನಡುವೆ ಶಾಸಕರ ಈ ಪತ್ರ ಸಮರ ಸಿದ್ದರಾಮಯ್ಯ ಸರ್ಕಾರ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ.