Asianet Suvarna News Asianet Suvarna News

ಕ್ಯಾಪ್ಟನ್ ಮೋದಿ ತಂಡಕ್ಕೆ ಕರ್ನಾಟಕದಿಂದ ಬಿಜೆಪಿ ಸದಸ್ಯರ ಆರಿಸಿ, ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್ ಅಬ್ಬರ!

ಮಂಡ್ಯದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಟೀಂ ಇಂಡಿಯಾದ ಕ್ಯಾಪ್ಟನ್. ಈ ತಂಡಕ್ಕೆ ಕರ್ನಾಟಕದಿಂದ ಸದಸ್ಯರನ್ನು ಆರಿಸಿ, ಡಬಲ್ ಎಂಜಿನ್ ಸರ್ಕಾರ ಬಲಿಷ್ಠಗೊಳಿಸಿ ಎಂದು ಮನವಿ ಮಾಡಿದ್ದಾರೆ

First Published Apr 26, 2023, 1:57 PM IST | Last Updated Apr 26, 2023, 1:57 PM IST

ಕರ್ನಾಟಕದ ಹಾಗೂ ಉತ್ತರ ಪ್ರದೇಶದ ನಡುವೆ ತ್ರೇತಾಯುಗದಿಂದ ಆತ್ಮೀಯ ಸಂಬಂಧ ಇದೆ ಎಂದು ಮಾತು ಆರಂಭಿಸಿದ ಯೋಗಿ ಆದಿತ್ಯನಾಥ್ ಡಬಲ್ ಎಂಜಿನ್ ಸರ್ಕಾರದ ಸಾಧನೆ ಜೊತೆಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡ ಯೋಗಿ, ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದ್ದಾರೆ.  ಕಾಂಗ್ರೆಸ್ ಪ್ರತಿ ಕಾರ್ಯಕ್ರಮಗಳು ಪಂಚವರ್ಷ ಯೋಜನೆ ರೀತಿ ಇದೆ. ಮೊದಲ ಪಂಚವರ್ಷ ಯೋಜನೆಯಲ್ಲಿ ಯೋಜನೆ ರೂಪುಗೊಳ್ಳುತ್ತಿದೆ. ಮುಂದಿನ ಪಂಚವರ್ಷ ಯೋಜನೆಯಲ್ಲಿ ಉದ್ಘಾಟನೆಗೊಳ್ಳುತ್ತಿತ್ತು, 3ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಲನ್ಯಾಸಗೊಳ್ಳುತ್ತಿತ್ತು. ಬಳಿಕ ಯೋಜನೆ ಕೈಬಿಡಲಾಗುತ್ತಿತ್ತು. ಆದರೆ ಮೋದಿ ಸರ್ಕಾರದಲ್ಲಿ ಅಭಿವೃದ್ಧಿ ವೇಗ ಯಾವ ರೀತಿ ನಡೆಯುತ್ತಿದೆ ಅನ್ನೋದು ನಿಮಗೆ ತಿಳಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ನನಗೆ ಹಲವು ಕೇಳುತ್ತಾರೆ, ಜನರು ಮತ್ತೆ ಮತ್ತೆ ಅಭೂತಪೂರ್ವ ಬೆಂಬಲ ನೀಡುತ್ತಿರುವುದು ಯಾಕೆ? ಕಾರಣ ಉತ್ತರ ಪ್ರದೇಶದಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ. ಬಿಜೆಪಿ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿದೆ. ಆದರೆ ಕಾಂಗ್ರೆಸ್ ಇದೇ ಪಿಎಫ್ಐ ಸಂಘಟನೆ ತುಷ್ಠೀಕರಣ ಮಾಡುತ್ತಿದೆ. ಧರ್ಮದ ಆಧಾರದಲ್ಲಿದ್ದ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಇದು ಸಂವಿಧಾನಕ್ಕೆ ಬಾಹಿರವಾಗಿದೆ.