ವಿಧಾನಸಭೆ ಚುನಾವಣೆ: ಕರ್ನಾಟಕದತ್ತ ರಾಷ್ಟ್ರೀಯ ನಾಯಕರ ಚಿತ್ತ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕವನ್ನೇ ಕೇಂದ್ರೀಕರಿಸಲು ದೆಹಲಿ ನಾಯಕರು ನಿರ್ಧಾರ ಮಾಡಿದ್ದಾರೆ. ಹೀಗಾಗಿ ರಾಜ್ಯಕ್ಕೆ  ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ.
 

First Published Dec 9, 2022, 4:35 PM IST | Last Updated Dec 9, 2022, 4:35 PM IST

ಫೆಬ್ರವರಿಯಲ್ಲಿ ತ್ರಿಪುರ ಮೇಘಾಲಯ ಹಾಗೂ ನಾಗಾಲ್ಯಾಂಡ್‌ ರಾಜ್ಯಗಳ ಎಲೆಕ್ಷನ್ ನಡೆಯಲಿದೆ‌. ಈ ಮೂರು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವೇ ದೊಡ್ಡ ರಾಜ್ಯ. ಹಾಗಾಗಿ ಕರ್ನಾಟಕವನ್ನೇ ಕೇಂದ್ರೀಕರಿಸಲು ನಾಯಕರು ನಿರ್ಧಾರ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕೆಳಗಿಳಿಸಲು ಕಾಂಗ್ರೆಸ್‌ ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಅಮಿತ್‌ ಶಾಗೆ ರಾಜ್ಯದ ಆಗು-ಹೋಗುಗಳ ಬಗ್ಗೆ ಮಾಹಿತಿ ಇದ್ದು, ರಾಜ್ಯಕ್ಕೆ ಕೇಂದ್ರದ ಬಿಜೆಪಿ ನಾಯಕರು ದಾಂಗುಡಿ ಇಡಲಿದ್ದಾರೆ. ಹಾಗೂ ಮುಂದಿನ ತಿಂಗಳು ರಾಹುಲ್ ಗಾಂಧಿ ಕೂಡ ರಾಜ್ಯಕ್ಕೆ ಬರಲಿದ್ದಾರೆ. ಕಾಂಗ್ರೆಸ್‌’ನಲ್ಲಿ ಯುವಕರಿಗೆ ಟಿಕೆಟ್‌ ನೀಡಲು ಹಕ್ಕೊತ್ತಾಯ ನಡೆದಿದ್ದು, ಕರ್ನಾಟಕದಲ್ಲಿ ಖಾತೆ ತೆಗೆಯಲು ಆಮ್‌ ಆದ್ಮಿ ಪಕ್ಷ ಕೂಡ ಹೋರಾಟಕ್ಕೆ ಇಳಿದಿದೆ.

Gujarat Election Result ಸಿಎಂ ಭೂಪೇಂದ್ರ ಪಟೇಲ್ ರಾಜೀನಾಮೆ, 12ಕ್ಕೆ ...