Asianet Suvarna News Asianet Suvarna News

Karnataka Assembly Election : ಕರ್ನಾಟಕದಲ್ಲಿ ಬಿಜೆಪಿಯಿಂದ ಗುಜರಾತ್‌ ಮಾದರಿ: ಕಾಂಗ್ರೆಸ್‌ ಲೆಕ್ಕಾಚಾರವೂ ಅದೇ?

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹಿರಿಯರಿಗೆ ಟಿಕೆಟ್‌ ಕೊಡದೆ ಗೆಲುವು ಸಾಧಿಸಿದ ಬಿಜೆಪಿ, ರಾಜ್ಯದಲ್ಲೂ ಗುಜರಾತ್‌ ಮಾದರಿ ಜಾರಿಗೆ ಚಿಂತನೆ ನಡೆಸಿದೆ. 
 

ಗುಜರಾತ್‌ ಮಾದರಿಗೆ ರಾಜ್ಯ ಕಾಂಗ್ರೆಸ್‌'ನಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು, ಬಿಜೆಪಿಯ ಬೆನ್ನಲ್ಲೇ ಕಾಂಗ್ರೆಸ್‌'ನಲ್ಲೂ ಗುಜರಾತ್‌ ಮಾದರಿ ಅಳವಡಿಕೆಗೆ ನಿರ್ಧರಿಸಲಾಗಿದೆ. ಕೈ ನಾಯಕರಿಂದಲೂ ಗುಜರಾತ್‌ ಮಾದರಿಯಲ್ಲಿ ಟಿಕೆಟ್‌ ಹಂಚಲು ಒತ್ತಾಯವಿದ್ದು, ಗೆಲುವಿನ ಹಾದಿ ಸುಗಮಗೊಳಿಸಲು ಈ ಲೆಕ್ಕಾಚಾರ ಹಾಕಿದೆ. ಗುಜರಾತ್‌ ಮಾದರಿ ಪರ ಸತೀಶ್‌ ಜಾರಕಿಹೊಳಿ ಬ್ಯಾಟಿಂಗ್ ಬೀಸಿದೆ. ಹಿರಿಯ ನಾಯಕರು ಈಗಾಗಲೇ ಹಲವು ಬಾರಿ ಗೆದ್ದಿದ್ದು, ಹಳೆಯ ಮಾದರಿ ಬಿಟ್ಟು ಹೊಸ ಮಾದರಿಯನ್ನು ಅನುಸರಿಸಬೇಕು. ಹಿರಿಯರಿಗೆ ಟಿಕೆಟ್‌ ನೀಡದೇ ಪರಿಷತ್‌ನಲ್ಲಿ ಅವಕಾಶ ನೀಡಲಿ  ಎಂದು ಸತೀಶ್‌ ಜಾರಕಿಹೊಳಿ ಒತ್ತಾಯಿಸಿದ್ದಾರೆ.