Karnataka Assembly Election: ಹೆಲಿಕಾಪ್ಟರ್‌ ಯಾತ್ರೆ ಮಾಡಲಿರುವ ಸಿದ್ದು-ಡಿಕೆಶಿ: ಹೈಕಮಾಂಡ್ ಒಪ್ಪಿಗೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ರಣಕಹಳೆ ಊದಿದ್ದು, ಬಸ್‌ ಯಾತ್ರೆಗೂ ಮೊದಲು ರಾಜ್ಯ ಕಾಂಗ್ರೆಸ್‌ ನಾಯಕರ ಹೆಲಿಕಾಪ್ಟರ್‌ ಯಾತ್ರೆ ಆರಂಭವಾಗಲಿದೆ. 
 

First Published Dec 14, 2022, 12:43 PM IST | Last Updated Dec 14, 2022, 12:43 PM IST

ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪ್ರತ್ಯೇಕವಾಗಿ ಬಸ್‌ ಯಾತ್ರೆ ನಡೆಸಿ ಪಕ್ಷ ಸಂಘಟನೆ ಮಾಡಲು ಸಜ್ಜಾಗಿದ್ದರು. ಆದರೆ ಒಗ್ಗಟ್ಟಾಗಿ ಯಾತ್ರೆ ಮಾಡುವಂತೆ ಹೈಕಮಾಂಡ್‌ ಸ್ಪಷ್ಟಸೂಚನೆ ನೀಡಿರುವ ಹಿನ್ನಲೆಯಲ್ಲಿ ಬಸ್‌ ಯಾತ್ರೆಗೂ ಮೊದಲು ಹೆಲಿಕಾಪ್ಟರ್‌ ಯಾತ್ರೆ ಆರಂಭಿಸಲಿದ್ದಾರೆ. ಜನವರಿ 9ರಿಂದ 25 ರವರೆಗೂ ಹೆಲಿಕಾಪ್ಟರ್‌ ಮೂಲಕ 20 ಜಿಲ್ಲೆಗೆ ತೆರಳಿ 150 ವಿಧಾನಸಭಾ ಕ್ಷೇತ್ರಗಳ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ನಿತ್ಯ ಎರಡು ಜಿಲ್ಲೆಯಂತೆ 15 ದಿನಗಳಲ್ಲಿ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಇದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿದೆ.

ಬೆಂಗಳೂರು: ಆಸ್ತಿ ತೆರಿಗೆ ಕಟ್ಟದ ಶಾಪಿಂಗ್‌ ಮಾಲ್‌ ಬ್ಯಾಂಕ್‌ ಖಾತೆ ಮೇಲೆ ಬಿಬಿಎಂಪಿ ಕಣ್ಣು..!