ಬಿಜೆಪಿ ಟಿಕೆಟ್‌ ಹಂಚಿಕೆ ಮುನ್ನ ಆಂತರಿಕ ಸಮೀಕ್ಷೆ: ಸಿ.ಟಿ ರವಿ ಸ್ಫೋಟಕ ಹೇಳಿಕೆ

ಬಿಜೆಪಿ ಟಿಕೆಟ್‌ ಹಂಚಿಕೆಗೂ ಮುನ್ನ ಆಂತರಿಕ ಸಮೀಕ್ಷೆ ಮಾಡಲಾಗುತ್ತದೆ. ನಂತರ ಸಾರ್ವಜನಿಕರ ಅಭಿಪ್ರಾಯದ ವರದಿಯನ್ನೂ ಪಡೆಯಲಾಗುತ್ತದೆ. ಎರಡೂ ವರದಿಯನ್ನು ಆಧರಿಸಿ ಕೇಂದ್ರ ಮಂಡಳಿಯಿಂದ ಟಿಕೆಟ್‌ಗಳನ್ನು ನೀಡಲಾಗುತ್ತದೆ.
 

First Published Dec 13, 2022, 7:33 PM IST | Last Updated Dec 13, 2022, 7:33 PM IST

ಬೆಂಗಳೂರು (ಡಿ.13): ರಾಜ್ಯದಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆಗೂ ಮುನ್ನ ಆಂತರಿಕ ಸಮೀಕ್ಷೆ ಮಾಡಲಾಗುತ್ತದೆ. ನಂತರ ಸಾರ್ವಜನಿಕರ ಅಭಿಪ್ರಾಯದ ವರದಿಯನ್ನೂ ಪಡೆಯಲಾಗುತ್ತದೆ. ಎರಡೂ ವರದಿಯನ್ನು ಆಧರಿಸಿ ಕೇಂದ್ರ ಮಂಡಳಿಯಿಂದ ಟಿಕೆಟ್‌ಗಳನ್ನು ನೀಡಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು ಒಂದೇ ಮಾನದಂಡವಾಗಿ ಪರಿಗಣಿಸುವುದಿಲ್ಲ. ಪಕ್ಷದ ಸಿದ್ಧಾಂತವೂ ಮುಖ್ಯವಾಗುತತದೆ. ಕೆಲವು ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದರೂ ಅವರು ನಡವಳಿಕೆಯಲ್ಲಿ ಸೋತಿದ್ದಾರೆ. ಸಣ್ಣ ಸಮುದಾಯಗಳ ನಾಯಕರಿಗೂ ಟಿಕೆಟ್‌ ಹಂಚಿಕೆ ಮಾಡುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುತ್ತದೆ. ಇನ್ನು ಎಲ್ಲ ಪಕ್ಷದ ಕಾರ್ಯಕರ್ತರೊಂದಿಗೆ ಸಮನ್ವಯ, ಸಿದ್ಧಾಂತ ಪಾಲನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ಮನದಟ್ಟು ಮಾಡಿ ಮತಯಾಚನೆ ಮಾಡಿ ಗೆಲ್ಲುವ ಅಭ್ಯರ್ಥಿಗಳನ್ನು ಟಿಕೆಟ್‌ ಕೊಡಲು ಪರಿಗಣಿಸಲಾಗುತ್ತದೆ. ಇನ್ನು ದೇಶದಲ್ಲಿ ಕಾಂಗ್ರೆಸ್‌ ನಾಯಕರು ಯಾವುದೇ ಯಾತ್ರೆಯನ್ನಾದರೂ ಮಾಡಲಿ. ಆದರೆ, ನಾವು ನೋಡದಿರುವ ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಈಗ ಸ್ಪರ್ಧೆಗೆ ಬಂದಿಲ್ಲ. ಎಲ್ಲರನ್ನೂ ಅವರವರ ಅಖಾಡದಲ್ಲಿಯೇ ಸೋಲಿಸಿದ್ದೇವೆ ಎಂದು ತಿಳಿಸಿದರು.