ಈಗ ಭಾರತ ಮಾತಾ ಕಿ ಜೈ ಅಂದ್ರೆ ಮಾತ್ರ ರಾಜಕೀಯ: ಜಮೀರ್‌ಗೆ ಸಿ ಟಿ ರವಿ ಟಾಂಗ್
'ಮುಸ್ಲಿಮರು ಶೇ 99 ರಷ್ಟು ಪಾಕಿಸ್ತಾನದಲ್ಲಿದ್ದಾರೆ. ಅಲ್ಲಿನ ಪರಿಸ್ಥಿತಿ ಮತ್ತು ಹಣೆ ಬರಹ ಏನಿದೆ..? ಸಾಬ್ರು ಓಟ್ ಹಾಕಿದ್ರೆ ಮಾತ್ರ ಅಧಿಕಾರಕ್ಕೆ ಬರುತ್ತೆ ಎಂಬ ಕಾಲವಿತ್ತು. ಆ ಕಾಲ ಹೋಗಿ ಬಹಳ ದಿನವಾಗಿದೆ ಜಮೀರ್ ಭಾಯ್'
ಬೆಂಗಳೂರು (ಜು. 25): 'ಮುಸ್ಲಿಮರು ಶೇ 99 ರಷ್ಟು ಪಾಕಿಸ್ತಾನದಲ್ಲಿದ್ದಾರೆ. ಅಲ್ಲಿನ ಪರಿಸ್ಥಿತಿ ಮತ್ತು ಹಣೆ ಬರಹ ಏನಿದೆ..? ಸಾಬ್ರು ಓಟ್ ಹಾಕಿದ್ರೆ ಮಾತ್ರ ಅಧಿಕಾರಕ್ಕೆ ಬರುತ್ತೆ ಎಂಬ ಕಾಲವಿತ್ತು. ಆ ಕಾಲ ಹೋಗಿ ಬಹಳ ದಿನವಾಗಿದೆ ಜಮೀರ್ ಭಾಯ್', ತನ್ನ ಓಟ್ ಬ್ಯಾಂಕ್ ತೋರಿಸಿ ಹೆದರಿಸೋ ಕಾಲ ಹೋಗಿ ಬಹಳ ಕಾಲವಾಗಿದೆ. ನಾವು ಓಟ್ ಹಾಕಿದ್ರೆ ಮಾತ್ರ ಗೆಲ್ತಾರೆ ಎಂಬ ಬ್ಲಾಕ್ ಮೇಲ್ ಮಾಡ್ತಿದ್ರಲ್ಲ ಆ ಕಾಲವಿಲ್ಲ. ಈಗ ಭಾರತ ಮಾತಾ ಕಿ ಜೈ ಅಂದ್ರೆ ಮಾತ್ರ ರಾಜಕೀಯ ಎಂದು ಸಿಟಿ ರವಿ ಜಮೀರ್ ಅಹಮದ್ ಖಾನ್ ಗೆ ಟಾಂಗ್ ನೀಡಿದ್ದಾರೆ.
ಪಕ್ಷ ಪೂಜೆ ಜತೆ ವ್ಯಕ್ತಿ ಪೂಜೆಯನ್ನೂ ಮಾಡ್ತೇನೆ, ತಪ್ಪೇನು? ಡಿಕೆಶಿಗೆ ಜಮೀರ್ ಟಾಂಗ್
ನಮ್ಮ ಸಂವಿಧಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ನನ್ನ ಅಭಿಪ್ರಾಯ ಹೇಳಿದ್ದೇನೆ. ನನ್ನ ಅಭಿಪ್ರಾಯ ಹೇಳುವುದರಲ್ಲಿ ತಪ್ಪೇನಿಲ್ಲ. ಮುಸ್ಲಿಮರಿಗೂ ಅವಕಾಶ ಸಿಗಬೇಕು ಎಂದು. ನಾವು ಜನಸಂಖ್ಯೆಯನುಸಾರ ಶೇ.15ರಷ್ಟುಇದ್ದೇವೆ. ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ಆದರೆ, ನಮ್ಮ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಯಾರು ಸಿಎಂ ಆಗಬೇಕೆಂದು ತೀರ್ಮಾನ ಮಾಡಲಿದ್ದಾರೆ ಎಂದು ಜಮೀರ್ ಹೇಳಿದ್ದರು.