Asianet Suvarna News Asianet Suvarna News

ಕಮಿಷನ್ 40% ಆಗಿದ್ದು ಯಾವಾಗ? ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿಚ್ಚಿಟ್ಟ ಸ್ಪೋಟಕ ಮಾಹಿತಿ!

 ಶೇ.40ರಷ್ಟು ಕಮಿಷನ್‌ ಮತ್ತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನು ಕಮಿಷನ್ 40% ಆಗಿದ್ದು ಯಾವಾಗ? ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿಚ್ಚಿಟ್ಟ ಸ್ಪೋಟಕ ವಿಚಾರ ಇಲ್ಲಿದೆ.

First Published Apr 12, 2022, 7:20 PM IST | Last Updated Apr 12, 2022, 7:20 PM IST

ಬೆಂಗಳೂರು (ಏ.12):  ಟೆಂಡರ್‌  ಪ್ರಕ್ರಿಯೆಯಲ್ಲಿ ಶೇ.40ರಷ್ಟು ಕಮಿಷನ್‌ ಬೇಡಿಕೆ ವಿಚಾರವಾಗಿ ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿ (Prime minister narendra Modi) ಅವರಿಗೆ ಪತ್ರ (Letter) ಬರೆದಿತ್ತು. ಇದೀಗ ಇದೇ ಕಮಿಷನ್‌ ವಿಚಾರವಾಗಿ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಎನ್ನುವರು ಸಚಿವ ಈಶ್ವರಪ್ಪನವರ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂತೋಷ್‌ ಆತ್ಮಹತ್ಯೆ ಪ್ರಕರಣ: 40 ಪರ್ಸೆಂಟ್‌ ಕಮಿಷನ್‌ ಆರೋಪದ ಇನ್ಸೈ‌ಡ್‌ ಕಹಾನಿ..!

ಈ ಹಿನ್ನಲೆಯಲ್ಲಿ ಶೇ.40ರಷ್ಟು ಕಮಿಷನ್‌ ಮತ್ತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನು ಕಮಿಷನ್ 40% ಆಗಿದ್ದು ಯಾವಾಗ? ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿಚ್ಚಿಟ್ಟ ಸ್ಪೋಟಕ ವಿಚಾರ ಇಲ್ಲಿದೆ.