Panchanga: ಇಂದು ಚತುರ್ಥಿ ತಿಥಿಯಂದು ಗಣಪತಿಯ ಆರಾಧನೆಯಿಂದ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ

First Published Nov 27, 2022, 9:02 AM IST | Last Updated Nov 27, 2022, 9:02 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಈ ದಿವಸ ಭಾನುವಾರವಾಗಿದ್ದು ಚತುರ್ಥಿ ತಿಥಿ, ಪೂರ್ವಾಷಾಢ ನಕ್ಷತ್ರವಾಗಿದೆ. ಭಾನುವಾರದಂದು ಚತುರ್ಥಿ ತಿಥಿ ಬಂದರೆ ಗಣಪತಿ ಆರಾಧನೆಗೆ ಶ್ರೇಷ್ಟ. ಹೀಗಾಗಿ ಚತುರ್ಥಿಯುಕ್ತವಾದ ಭಾನುವಾರ ದಿವಸ ಗಣಪತಿಗೆ ಗಂಧದ ಅಭಿಶೇಕ ಮಾಡಿಸಿದರೆ ಒಳಿತಾಗುವುದು.