ಇಂದು ಶೃತ ಪಂಚಮಿ, ಭಗವಂತನ ನಾಮಾವಳಿ, ವಿಷ್ಣುಸಹಸ್ರನಾಮ ಶ್ರವಣ ಮಾಡಬೇಕು
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಪುಷ್ಯ ನಕ್ಷತ್ರ, ಇಂದು ಶನಿವಾರ. ಜ್ಯೇಷ್ಠ ಮಾಸದ ಪಂಚಮಿಯನ್ನು ಶೃತ ಪಂಚಮಿ ಎಂದು ಕರೆಯುತ್ತಾರೆ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಪುಷ್ಯ ನಕ್ಷತ್ರ, ಇಂದು ಶನಿವಾರ. ಜ್ಯೇಷ್ಠ ಮಾಸದ ಪಂಚಮಿಯನ್ನು ಶೃತ ಪಂಚಮಿ ಎಂದು ಕರೆಯುತ್ತಾರೆ. ಶೃತ ಎಂದರೆ ಕೇಳಿಸಿಕೊಳ್ಳುವುದು, ಸತ್‌ಚಿಂತನೆಯನ್ನು, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಹೀಗೆ ಯಾವುದನ್ನೂ ಕೇಳಿದರೂ ಆಗುವುದು.