Panchang: ಇಂದು ಅಂಗಾರಕ ಸಂಕಷ್ಟ ಚತುರ್ಥಿ, ಗಣಪತಿ ಆರಾಧನೆ ಮಾಡಿ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಮಂಗಳವಾರ, ತೃತೀಯಾ ತಿಥಿ ಉಪರಿ ಚತುರ್ಥಿ ತಿಥಿ, ಆಶ್ಲೇಷಾ ನಕ್ಷತ್ರ.
ಇಂದು ಸಂಜೆ ಹೊತ್ತಿಗೆ ಚತುರ್ಥಿ ತಿಥಿ ಆರಂಭವಾಗುತ್ತದೆ. ಮಂಗಳವಾರ ಕೃಷ್ಣ ಪಕ್ಷ ಚತುರ್ಥಿ ಬಂದರೆ ಅದು ಅಂಗಾರಕ ಸಂಕಷ್ಟ ಚತುರ್ಥಿ. ಬುದ್ಧಿದಾತ ಗಣಪತಿಯ ವಿಚಾರಗಳನ್ನು ವಿಸ್ತೃತವಾಗಿ ತಿಳಿಸುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ಇಂದು ಆಶ್ಲೇಷಾ ನಕ್ಷತ್ರವಿದ್ದು, ನಾಗರ ಕಟ್ಟೆಗೆ ಎಳನೀರಿನ ಅಭಿಷೇಕ ಮಾಡುವುದು ಕೂಡಾ ಶ್ರೇಯಸ್ಕರವಾಗಿದೆ. ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ಶಾಸ್ತ್ರಿಗಳು ತಿಳಿಸಿದ್ದಾರೆ.