Panchanga: ಈ ದಿವಸ ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಭಯ ಹೋಗುತ್ತದೆ!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Dec 24, 2022, 9:06 AM IST | Last Updated Dec 24, 2022, 9:09 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಶನಿವಾರ, ಪ್ರತವತ್ಬಾತ್ ತಿಥಿ, ಪೂರ್ವಜಾಡ ನಕ್ಷತ್ರ. ಪುಷ್ಯ ಮಾಸ ಪ್ರಾರಂಭವಾಗಿದ್ದು, ಸೂರ್ಯ ಧನುಸ್ಸು ರಾಶಿಯಲ್ಲಿದ್ದಾನೆ. ಇದನ್ನ ಧನುಪುಷ್ಯ ಅಂತಾ ಕರೆಯುತ್ತೇವೆ. ಈ ಮಾಸದಲ್ಲಿ ಶುಭಕಾರ್ಯಗಳಿಗೆ ಆಸ್ಪದವಿಲ್ಲ. ಆದರೆ ದೇವತೆಗಳ ಆರಾಧನೆಯನ್ನು ಮಾಡಬಹುದು. ಈ ದಿನದ ವಿಶೇಷವೆನೆಂದರೆ ಶನಿವಾರದ ಶನಿವಾರಗಳಲ್ಲಿ ವಿಷ್ಣು ಸಹಸ್ರನಾಮವನ್ನು ಪರಾಯಣ ಮಾಡುವುದರಿಂದ ಯಾವುದೇ ರೀತಿಯ ಭಯ ಇದ್ದರೂ ವಸ್ತುತಃ ಕಡಿಮೆ ಆಗುತ್ತದೆ. ಜೊತೆಗೆ ಈ ದಿನದ ಮಹತ್ವ ಏನು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನೂ ತಿಳಿಸಿದ್ದಾರೆ.