Panchanga: ಅಮಾವಾಸ್ಯೆಯಲ್ಲಿ ಪಿತೃದೇವತೆಗಳ ಆರಾಧನೆಯನ್ನು ಮಾಡುವುದರಿಂದ ಬಲ ಸಿಗುತ್ತದೆ!
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಅಮಾವಾಸ್ಯೆ ತಿಥಿ, ಮೂಲ ನಕ್ಷತ್ರ. ಸಾಮಾನ್ಯವಾಗಿ ಅಮಾವಾಸ್ಯೆ ಅಂದ್ರೆ ಒಂದು ರೀತಿಯ ಭಯದ ವಾತಾವರಣ ಇರುತ್ತದೆ. ಯಾಕೆಂದರೆ ಜನರಿಗೆ ಯಾಕೆ ಭಯ ಪಡಬೇಕು ಅಂತ ಸ್ಪಷ್ಟವಾದ ಮಾಹಿತಿ ಇಲ್ಲ. ನಮ್ಮ ಮನಸ್ಸಿನಲ್ಲಿ ಅಮಾವಾಸ್ಯೆ ಅಂದರೆ ಏನೋ ಕೆಟ್ಟ ದಿವಸ ಅಂತ ಪರಿಗಣನೆ ಮಾಡುತ್ತೇವೆ. ವಸ್ತುಶಃ ಅಮಾವಾಸ್ಯೆ ಅಂದರೆ ಶ್ರೇಷ್ಠವಾದದ್ದು. ಪಿತೃ ದೇವತೆಗಳ ಮಹಾಕಾಲ ಅಮಾವಾಸ್ಯೆ. ಈ ಸಮಯದಲ್ಲಿ ಪಿತೃದೇವತೆಗಳ ಆರಾಧನೆಯನ್ನು ಮಾಡುವುದರಿಂದ ಬಲ ಸಿಗುತ್ತದೆ. ಜೊತೆಗೆ ಈ ದಿನದ ವಿಶೇಷಗಳೇನು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನೂ ತಿಳಿಸಿದ್ದಾರೆ.