Panchanga: ಇಂದು ನಾಗರಪಂಚಮಿ, ಮಂಗಳಗೌರಿ ಹಬ್ಬ..
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಮಂಗಳವಾರ, ಉತ್ತರ ಫಲ್ಗುಣಿ ನಕ್ಷತ್ರ. ನಾಗರಪಂಚಮಿ ಮತ್ತು ಮಂಗಳಗೌರಿ ಹಬ್ಬ ಇಂದಿನ ಆಚರಣೆ..
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಮಂಗಳವಾರ, ಉತ್ತರ ಫಲ್ಗುಣಿ ನಕ್ಷತ್ರ. ಇಂದು ಶ್ರಾವಣ ಮಾಸದ ಪಂಚಮಿ ತಿಥಿಯಾಗಿರುವುದರಿಂದ ನಾಗರ ಪಂಚಮಿ ಹಬ್ಬ ಆಚರಣೆ ಮಾಡಲಾಗುತ್ತದೆ.
ಸರ್ವರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು..
ಅದರೊಂದಿಗೆ ಶ್ರಾವಣ ಮಾಸದ ಮಂಗಳವಾರವಾಗಿರುವುದರಿಂದ ಮಂಗಳ ಗೌರಿ ಹಬ್ಬವೂ ಇದೆ. ಇನ್ನು ಉಪಕರ್ಮ ಆಚರಣೆಯೂ ಇದೆ. ಈ ಮೂರೂ ಹಬ್ಬಗಳ ಆಚರಣೆ ಈ ದಿನದ ವಿಶೇಷವಾಗಿದೆ. ಇದಲ್ಲದೆ, ನಾಗರ ಪಂಚಮಿಯ ಕುರಿತು ಹೆಚ್ಚಿನ ವಿಷಯವನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.