Panchanga: ಚಂದ್ರಬಲ ಕಡಿಮೆ, ಈಶ್ವರನ ಆರಾಧಾನೆಯಿಂದ ಮಾನಸಿಕ ಧೈರ್ಯ, ಸ್ಥೈರ್ಯ ಸಾಧ್ಯವಾಗುವುದು
ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಉತ್ತರಾಷಾಢ ನಕ್ಷತ್ರ, ಇಂದು ಸೋಮವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಉತ್ತರಾಷಾಢ ನಕ್ಷತ್ರ, ಇಂದು ಸೋಮವಾರ. ಚತುರ್ದಶಿಯಲ್ಲಿ ಚಂದ್ರನ ಬಲ ಕಡಿಮೆಯಾಗುತ್ತದೆ. ಚಂದ್ರ ಬಲ ಇಲ್ಲದಿದ್ದಾಗ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಮನಸ್ಸು ಸಂಕುಚಿತವಾಗುತ್ತದೆ. ಹಾಗಾಗಿ ಈಶ್ವರನ ಆರಾಧನೆ ಮಾಡಬೇಕು. ರುದ್ರಾಭಿಷೇಕ ಮಾಡಿಸಿ, ಆ ನೀರನ್ನು ಸೇವಿಸಬೇಕು. ಆಗ ಮನಸ್ಸು ತಿಳಿಯಾಗುತ್ತದೆ.