ನವರಾತ್ರಿ: ತಾಯಿ ಚಂದ್ರಘಂಟಾ ದೇವಿಯ ಪೂಜೆಯಿಂದ ಮನಸ್ಸಿಗೆ ನೆಮ್ಮದಿ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ವಿಶಾಖ ನಕ್ಷತ್ರ. ಇಂದು ಮೂರನೇ ನವರಾತ್ರಿ. ತಾಯಿ ಚಂದ್ರಾಘಂಟಾ ತಾಯಿಯನ್ನು ಪೂಜಿಸುತ್ತೇವೆ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ವಿಶಾಖ ನಕ್ಷತ್ರ. ಇಂದು ಮೂರನೇ ನವರಾತ್ರಿ. ತಾಯಿ ಚಂದ್ರಾಘಂಟಾ ತಾಯಿಯನ್ನು ಪೂಜಿಸುತ್ತೇವೆ. ತಾಯಿ ಜಗನ್ಮಾತೆ ಚಂದ್ರನನ್ನು ಮುಡಿಯಲ್ಲಿ ಅಲಂಕರಿಸಿಕೊಂಡಿದ್ದಾಳೆ. ಹಾಗಾಗಿ ಆಕೆಯನ್ನು ಚಂದ್ರಘಂಟಾ ಎನ್ನುತ್ತಾರೆ. ಚಂದ್ರ ಮನಸ್ಸಿನ ಮೇಲೆ ಅಧಿಪತ್ಯ ಹೊಂದಿದವನು. ಹಾಗಾಗಿ ಮನಸ್ಸಿನ ನೆಮ್ಮದಿಗೆ ತಾಯಿ ಚಂದ್ರಘಂಟಾ ದೇವಿಯನ್ನು ಪೂಜಿಸಿದರೆ, ಪ್ರಾರ್ಥಿಸಿದರೆ ಆಕೆ ನಮ್ಮನ್ನು ಹರಸುತ್ತಾಳೆ. ಮನಸ್ಸು ತಿಳಿಯಾಗುತ್ತದೆ. ಆಹ್ಲಾದಕರವಾಗಿರುತ್ತದೆ.