Asianet Suvarna News Asianet Suvarna News

ಪಂಚಾಂಗ: ಇಂದು ಮೂಲ ನಕ್ಷತ್ರ, ತಾಯಿ ಸರಸ್ವತಿಯನ್ನು ಆರಾಧಿಸಬೇಕು, ಆಕೆ ಅನುಗ್ರಹಿಸಬೇಕು

Oct 12, 2021, 8:28 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಹೀಗಿದೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಮೂಲ ನಕ್ಷತ್ರ, ಇಂದು ಮಂಗಳವಾರ. ಸಪ್ತಮಿ ತಿಥಿ, ಮೂಲ ನಕ್ಷತ್ರ ಒಳ್ಳೆಯ ಕಾಲ. ಮೂಲ ನಕ್ಷತ್ರದಂದು ಸರಸ್ವತಿಯನ್ನು ಆರಾಧನೆ ಮಾಡಲಾಗುತ್ತದೆ. ಪ್ರತಿಯೊಬ್ಬರಿಗೂ ಆಕೆಯ ಅನುಗ್ರಹ ಬೇಕೇಬೇಕು. ಇಂದು ನವರಾತ್ರಿಯ 7 ನೇ ದಿನ. ತಾಯಿ ಕಾಳರಾತ್ರಿ ಸ್ವರೂಪದಲ್ಲಿ ಪ್ರಕಟಗೊಳ್ಳುತ್ತಾಳೆ.