Asianet Suvarna News Asianet Suvarna News

ನವರಾತ್ರಿ 3 ನೇ ದಿನ: ಚಂದ್ರಘಂಟಾ ದೇವಿಯ ಆರಾಧನೆಯಿಂದ ಮನೆ, ಮನಸ್ಸಿನಲ್ಲಿ ಶಾಂತಿ, ಸಮಾಧಾನ

Oct 9, 2021, 8:46 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ವಿಶಾಖ ನಕ್ಷತ್ರ, ಇಂದು ಶನಿವಾರ. ಇಂದು ನವರಾತ್ರಿಯ 3 ನೇ ದಿನ. ಚಂದ್ರಘಂಟಾ ದೇವಿಯನ್ನು ಇಂದು ಆರಾಧಿಸಬೇಕು. ತಾಯಿ ಜಗನ್ಮಾತೆಯನ್ನು ಪೂಜಿಸುವುದರಿಂದ, ಆಕೆಯನ್ನು ಪ್ರಾರ್ಥಿಸುವುದರಿಂದ ಮನಸ್ಸು ಸಮಾಧಾನವಾಗಿರುತ್ತದೆ. ಚಂದ್ರಘಂಟಾ ತಾಯಿ ಶಾಂತತೆಯನ್ನು ಪ್ರತಿನಿಧಿಸುತ್ತಾಳೆ.