Panchanga: ಇಂದು ದಶಪಾಪಹರ ದಶಮಿ, ಹೀಗೆ ಮಾಡಿದರೆ ಪಾಪಗಳು ನಿವಾರಣೆಯಾಗುತ್ತವೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಹಸ್ತ ನಕ್ಷತ್ರ, ಇಂದು ಗುರುವಾರ. 

First Published Jun 9, 2022, 8:40 AM IST | Last Updated Jun 9, 2022, 9:16 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಹಸ್ತ ನಕ್ಷತ್ರ, ಇಂದು ಗುರುವಾರ. ಜ್ಯೇಷ್ಠ ಮಾಸದ ದಶಮಿಯನ್ನು ದಶಪಾಪಹರ ದಶಮಿ ಎಂದು ಆಚರಿಸಲಾಗುತ್ತದೆ. ಲೌಕಿಕ ಜೀವನದಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಾಕಷ್ಟು ಪಾಪಗಳನ್ನು ಮಾಡಿರುತ್ತೇವೆ. ಇದಕ್ಕೆ ಏನು ಮಾಡಬೇಕು ಅಂದರೆ ಬೊಗಸೆಯಲ್ಲಿ ಎಳ್ಳು/ತಿಲವನ್ನು ಹಿಡಿದು 10 ಬಾರಿ ನೀರಿಗೆ ಬಿಡಬೇಕು. ಹೀಗೆ ಮಾಡಿದರೆ ನಮ್ಮ ಪಾಪಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಇನ್ನು ಕೆಲವರಿಗೆ ಇದನ್ನೆಲ್ಲಾ ಮಾಡಲು ಕಾಲ ಇರುವುದಿಲ್ಲ ಅಂತವರು ಈ ದಿವ್ಯವಾದ ಮಂತ್ರವನ್ನು ಹೇಳಿಕೊಳ್ಳಬಹುದು.