Panchanga: ಭಾನುವಾರ, ರಥಸಪ್ತಮಿ, ಸೂರ್ಯನ ಈ ದಿವ್ಯವಾದ ಮಂತ್ರ ಪಠಣದಿಂದ ವಿಶೇಷ ಫಲ
ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಭಾನುವಾರ. ಭಾನುವಾರ ಸಪ್ತಮಿ ಬಂದಿದ್ದು, ಸೂರ್ಯನ ಆರಾಧನೆಗೆ, ಪ್ರಾರ್ಥನೆಗೆ ಪ್ರಶಸ್ತವಾದ ಕಾಲ.
ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೇಗಿವೆ ನೋಡೋಣ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಭಾನುವಾರ. ಭಾನುವಾರ ಸಪ್ತಮಿ ಬಂದಿದ್ದು, ಸೂರ್ಯನ ಆರಾಧನೆಗೆ, ಪ್ರಾರ್ಥನೆಗೆ ಪ್ರಶಸ್ತವಾದ ಕಾಲ. ಸೂರ್ಯೋಪಾಸನೆಯಿಂದ ಆರೋಗ್ಯ ವೃದ್ಧಿ, ಬುದ್ಧಿ ಜಾಗೃತವಾಗುವುದು. ನಮ್ಮ ಆತ್ಮಬಲ ವೃದ್ಧಿಯಾಗುವುದು. ಸೂರ್ಯನಿಗೆ ಸಂಬಂಧಿಸಿದ ವಿಶಿಷ್ಟವಾದ ಮಂತ್ರ ಪಠಣದಿಂದ ಅನುಕೂಲವಾಗುವುದು.