Panchang: ಇಂದು ಸೌಭಾಗ್ಯ ಗೌರಿ ವ್ರತ, ಸುಮಂಗಲಿಯರು ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ

 ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಭರಣಿ ನಕ್ಷತ್ರ, ಇಂದು ಸೋಮವಾರ. ಚೈತ್ರಮಾಸದ ಪ್ರಾರಂಭದ ದಿನಗಳಲ್ಲಿ ಬರುವ ತೃತೀಯವನ್ನು ಸೌಭಾಗ್ಯ ವ್ರತ ಎಂದು ಕರೆಯುತ್ತಾರೆ. 

First Published Apr 4, 2022, 8:21 AM IST | Last Updated Apr 4, 2022, 8:21 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಭರಣಿ ನಕ್ಷತ್ರ, ಇಂದು ಸೋಮವಾರ. ಚೈತ್ರಮಾಸದ ಪ್ರಾರಂಭದ ದಿನಗಳಲ್ಲಿ ಬರುವ ತೃತೀಯವನ್ನು ಸೌಭಾಗ್ಯ ವ್ರತ ಎಂದು ಕರೆಯುತ್ತಾರೆ. ಇಂದು ಗೌರಿಯನ್ನು ಕಲಶದ ರೂಪದಲ್ಲಿ ಪ್ರತಿಷ್ಠಾಪಿಸಿ, ಆಕೆಯನ್ನು ಪೂಜಿಸಿದರೆ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.