Panchanga: ಶುಕ್ರನ ಅನುಗ್ರಹಕ್ಕಾಗಿ ಬಿಳಿ ವಸ್ತ್ರ, ಅವರೆ ಧಾನ್ಯ ದಾನ ಮಾಡಬೇಕು
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಪುನರ್ವಸು ನಕ್ಷತ್ರ, ಇಂದು ಶುಕ್ರವಾರ. ಅಮ್ಮನವರ ಪ್ರಾರ್ಥನೆ, ಲಲಿತಾ ಪಾರಾಯಣ ಪಠಣದಿಂದ ಮನಸ್ಸಿಗೆ ಸಮಾಧಾನ ಸಿಗುವುದು.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಪುನರ್ವಸು ನಕ್ಷತ್ರ, ಇಂದು ಶುಕ್ರವಾರ. ಅಮ್ಮನವರ ಪ್ರಾರ್ಥನೆ, ಲಲಿತಾ ಪಾರಾಯಣ ಪಠಣದಿಂದ ಮನಸ್ಸಿಗೆ ಸಮಾಧಾನ ಸಿಗುವುದು. ಇನ್ನು ಶುಕ್ರವಾರ ಶುಕ್ರನ ಪ್ರಭಾವ ಹೆಚ್ಚಿರುತ್ತದೆ. ನಮ್ಮ ಸುಖ, ಸಮೃದ್ಧಿ, ಆರ್ಥಿಕ ಸ್ಥಿತಿ ಎಲ್ಲದಕ್ಕೂ ಶುಕ್ರನ ಅನುಗ್ರಹ ಬೇಕೇಬೇಕು. ಹಾಗಾಗಿ ಶುಕ್ರನ ಆರಾಧನೆ ಮಾಡಿ, ಬಿಳಿ ವಸ್ತ್ರ, ಅವರೆ ಧಾನ್ಯ ದಾನ ಮಾಡುವುದರಿಂದ ಶುಕ್ರನ ಅನುಗ್ರಹ ನಿಶ್ಚಿತವಾಗಿ ಆಗುವುದು.