ವಿಕ್ರಮನಿಗೆ ಮದ, ದಸರಾ ಮಹೋತ್ಸವದಿಂದ ದೂರ
- ಮೈಸೂರು ದಸರಾದಲ್ಲಿ ಕಳೆದ ಐದು ವರ್ಷಗಳಿಂದ ಆಕರ್ಷಕ ಆನೆಯಾಗಿರುವ ವಿಕ್ರಮ
-ದಸರಾದ ಪೂಜಾ ವಿಧಿ ವಿಧಾನಗಳಲ್ಲಿ ಪಟ್ಟದ ಆನೆಯಾಗಿ ಜವಾಬ್ದಾರಿ ಹೊತ್ತಿದ್ದ ವಿಕ್ರಮ
- ವಿಕ್ರಮ ಆನೆಗೆ ಇದೀಗ ಮದವೇರಿದೆ, ಇದೇ ಕಾರಣದಿಂದ ಈ ಬಾರಿ ಕಾರ್ಯಕ್ರಮದಿಂದ ದೂರ
ಮೈಸೂರು (ಅ. 12): ಕಳೆದ ಐದು ವರ್ಷಗಳಿಂದ ಸತತವಾಗಿ ಮೈಸೂರು ದಸರಾದಲ್ಲಿ ಆಕರ್ಷಕ ಆನೆ ವಿಕ್ರಮ. ಅರಮನೆಯಲ್ಲಿ ಜರುಗುವ ಖಾಸಗಿ ದಸರಾದ ಪೂಜಾ ವಿಧಿ ವಿಧಾನಗಳಲ್ಲಿ ಪಟ್ಟದ ಆನೆಯಾಗಿ ಜವಾಬ್ದಾರಿ ಹೊತ್ತಿದ್ದ ವಿಕ್ರಮನಿಗೆ ಇದೀಗ ಮದವೇರಿದೆ. ಇದೇ ಕಾರಣ ಈ ಬಾರಿ ದಸರಾ ಮಹೋತ್ಸವ ಕಾರ್ಯಕ್ರಮದಿಂದ ದೂರ ಉಳಿಸಲಾಗಿದೆ. ವಿಕ್ರಮನ ಬದಲಿಗೆ ಗೋಪಾಲಸ್ವಾಮಿ ಆನೆಗೆ ಪಟ್ಟದ ಆನೆಯ ಸ್ಥಾನವನ್ನು ಈ ಬಾರಿ ನೀಡಲಾಗಿದೆ.
ಆಫ್ರಿಕಾ ಬೊಂಬೆಗಳು ದಾವಣಗೆರೆಯಲ್ಲಿ ಪ್ರದರ್ಶನ; ವಿಶೇಷ ಸಾಂಸ್ಕೃತಿಕ ಪ್ರಯೋಗ
58 ವರ್ಷದ ವಿಕ್ರಮ ಆನೆಯ ಶರೀರದ ಎತ್ತರ 2.89 ಮೀಟರ್ ಇದ್ದು, 3.43 ಮೀಟರ್ ಉದ್ದ, 3,820 ಕೆ.ಜಿ ತೂಕವಿದೆ. ವಿಕ್ರಮ ಕಳೆದ 5 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾನೆ. ಬಹಳ ಸೌಮ್ಯ ಸ್ವಭಾವದ ಆನೆ ಎಂಬ ಹೆಗ್ಗಳಿಕೆ ಹೊಂದಿದ್ದ ವಿಕ್ರಮನಿಗೆ ಇದೀಗ ಮದಹೇರಿರುವ ಕಾರಣ ಭಿನ್ನ ವರ್ತನೆ ಮಾಡುತ್ತಿದ್ದಾನೆ. ಮದ ಇಳಿಯಬೇಕು ಎಂದರೆ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಬೇಕು. ಹೀಗಾಗಿ ಇವನನ್ನು ಪ್ರತ್ಯೇಕವಾಗಿ ಅರಮನೆಯ ಆವರಣದಲ್ಲಿ ಕಟ್ಟಿಹಾಕಲಾಗಿದೆ.