Asianet Suvarna News Asianet Suvarna News

ಗದಗನಲ್ಲಿ ಕೋಳಿ ಫಾರ್ಮ್‌ ಕಂಟಕ: ನೊಣಗಳಿಂದಾಗಿ ಸಾಂಕ್ರಾಮಿಕ ರೋಗದ ಭೀತಿ..!

* ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ನೊಣಗಳ ಕಾಟ
* ಕೋಳಿ ಫಾರ್ಮ್‌ನಿಂದ ಹೆಚ್ಚಾದ ನೊಣಗಳ ಕಾಟ 
* ಕೋಳಿ ಫಾರ್ಮ್‌ ಬಂದ್‌ ಮಾಡಿ ಜನರ ಜೀವ ರಕ್ಷಿಸಿ ಅಂತ ಗ್ರಾಮಸ್ಥರು ಆಗ್ರಹ 
 

ಗದಗ(ಜೂ.24): ನೊಣಗಳ ಕಾಟದಿಂದ ಜನರು ನಿತ್ಯ ನರಕ ಅನುಭವಿಸುತ್ತಿರುವ ಘಟನ ತಾಲೂಕಿನ ಹರ್ತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುತ್ತ ಇರುವ ಕೋಳಿ ಫಾರ್ಮ್‌ನಿಂದ ನೊಣಗಳ ಕಾಟ ಹೆಚ್ಚಾಗಿದೆ. ಹೀಗಾಗಿ ಕೋಳಿ ಫಾರ್ಮ್‌ಗಳನ್ನ ಬಂದ್‌ ಮಾಡಿ ಗ್ರಾಮವನ್ನ ಉಳಿಸಿ ಅಂತ ಜನರು ಒತ್ತಾಯಿಸಿದ್ದಾರೆ. ಕೊರೋನಾ ಅಲೆಯ ಮಧ್ಯೆ ನೊಣಗಳ ಕಾಟದಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ನೊಣಗಳ ಉತ್ಪತ್ತಿಗೆ ಕಾರಣವಾದ ಕೋಳಿ ಫಾರ್ಮ್‌ಗಳನ್ನ ಬಂದ್‌ ಮಾಡಿ ಜನರ ಜೀವ ರಕ್ಷಿಸಿ ಅಂತ ಗ್ರಾಮಸ್ಥರು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.

Video Top Stories