Asianet Suvarna News Asianet Suvarna News

ಇಸ್ರೋ ವಿಜ್ಞಾನಿಯಿಂದ ಕ್ಯಾನ್ಸರ್ ರೋಗಿಗಳ ಆರೈಕೆ: ಕಿದ್ವಾಯಿ ಆಸ್ಪತ್ರೆಯಲ್ಲಿ ಚಂದ್ರಯಾನ-3 ಸೈಂಟಿಸ್ಟ್‌ಗಳು !

ವಿಜ್ಞಾನಿಗಳ ಅಂದ್ರೆನೇ ಫುಲ್ ಬ್ಯುಸಿ. ಅದ್ರಲ್ಲೂ ನಮ್ಮ ದೇಶದ ಹೆಮ್ಮಯ ಇಸ್ರೋ ವಿಜ್ಞಾನಿಗಳಂತೂ ಈಗ ಉಸಿರಾಡಲು ಸಹ ಸಮಯ ವಿಲ್ಲದಂತಾಗಿದೆ. ಇದೆಲ್ಲದರ ನಡುವೆ ಚಂದ್ರಯಾನ-3 ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ ವಿಜ್ಞಾನಿಯೊಬ್ಬರು ಕ್ಯಾನ್ಸರ್ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. 
 

ಫ್ಲಾಸ್ಕ್ ಹಿಡಿದು ಚಹಾ ವಿತರಿಸುತ್ತಿರುವ ವ್ಯಕ್ತಿ ಹೆಸರು ರಾಕೇಶ್ ನಯ್ಯರ್(Rakesh Nayyar). ಇವರು ಬರೀ ವಿಜ್ಞಾನಿ ಅಲ್ಲ ಚಂದ್ರಯಾನ-3(Chandrayaan3) ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ್ದಾರೆ.  ಇಸ್ರೋ ವಿಜ್ಞಾನಿಯಾಗಿರುವ ರಾಕೇಶ್ ನಯ್ಯರ್ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೋಗಗಳ ಸೇವೆಗೆ ನಿಂತಿದ್ದಾರೆ. ರೋಗಿಗಳಿಗೆ ನಿತ್ಯವೂ ಹಾಲು, ಚಹಾ ಹಾಗೂ ಹಣ್ಣುಗಳನ್ನು ಉಚಿತವಾಗಿ ನೀಡುತ್ತಾ ಸಮಾಜ ಸೇವೆ ಮಾಡುತ್ತಿದ್ದಾರೆ. ರಾಕೇಶ್ ನಯ್ಯರ್ ಈ ಸಮಾಜ ಸೇವೆಗೆ ಸಹೋದ್ಯೋಗಿಗಳು ಹೆಗಲು ಕೊಟ್ಟಿದ್ದಾರೆ. ಕೇವಲ 100 ಕಪ್ ಚಹಾದಿಂದ ಆರಭಿಸಿದ್ದ ಇವರ ಸೇವೆ ಈಗ ದಿನಕ್ಕೆ 1500 ಮಂದಿಗೆ ವಿಸ್ತರಿಸಿದೆ. ಕಳೆದ 8 ವರ್ಷಗಳಿಂದ ‘ಮಿಷನ್ ಚಾಯ್’(Mission Chai) ಎನ್ನುವ ಹೆಸರಿನೊಂದಿಗೆ ಈ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ಅವರ ಸಂಬಂಧಿಕರನ್ನು ತಮ್ಮವರಂತೆ ನೋಡಿಕೊಂಡು, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವಿಜ್ಞಾನಿಗಳ ಕಾರ್ಯಕ್ಕೆ ಎಲ್ಲಾ ಸಂತಸ ವ್ಯಕ್ತಪಡಿಸುತ್ತಿದ್ದಾರೆ.  

ಇದನ್ನೂ ವೀಕ್ಷಿಸಿ:  ಕಠಿಣ ಸವಾಲಿನ ಮಧ್ಯೆ ದಕ್ಷಿಣ ಧ್ರುವದಲ್ಲಿ ‘ವಿಕ್ರಮ’ನ ಪರಾಕ್ರಮ: ಚಂದ್ರನ ಮೇಲೆ ಏನೆಲ್ಲ ಅಧ್ಯಯನ..?

Video Top Stories