ಬಿಸಿಲನಾಡ ಅಕ್ಕಿಗೂ ತಟ್ಟಿದ ‘ಬರ’ದ ಬಿಸಿ: ಭತ್ತದ ಇಳುವರಿ ಕುಂಠಿತ..ದುಬಾರಿಯಾಗುತ್ತಾ ಅಕ್ಕಿ..?

ಅದು ಬಿಸಿಲೂರಿನ ಭತ್ತದನಾಡು.. ಅಲ್ಲಿ ಬೆಳೆಯುವ ಅಕ್ಕಿಗೆ ಎಲ್ಲೆಡೆಯೂ ಭಾರೀ ಡಿಮ್ಯಾಂಡ್ ಇದೆ. ಅದರಲ್ಲೂ ತುಂಗಭದ್ರ ಪ್ರದೇಶದ ಸೋನಾಮಸೂರಿ ಅಕ್ಕಿ ಅಂದ್ರೆ ಯಾರುತಾನೆ ಬೇಡ ಅಂತಾರೆ ಹೇಳಿ.. ಜನರು ಹುಡುಕಿಕೊಂಡು ಬಂದು ಖರೀದಿ ಮಾಡುತ್ತಾರೆ. ಆದ್ರೆ ಈ ವರ್ಷ ಬರದ ಬಿಸಿ ಅಕ್ಕಿಗೂ ತಟ್ಟಿದ್ದು, ಅಕ್ಕಿ ದರ ಕೇಳುವ ಗ್ರಾಹಕರಿಗೆ ತಲೆ ತಿರುಗುತ್ತಿದೆ.
 

First Published Oct 7, 2023, 11:18 AM IST | Last Updated Oct 7, 2023, 11:18 AM IST

ಕೊರೊನಾ ಬಳಿಕ ಅಗತ್ಯ ವಸ್ತುಗಳ ಬೆಲೆ ಗಗನದ ಕಡೆ ನಾಗಲೋಟದಲ್ಲಿ ಓಡ್ತಿದ್ರೆ. ಬೆಲೆ ಏರಿಕೆ ಹೊಡೆತದಿಂದ ಬೆಚ್ಚಿ ಬಿದ್ದಿರುವ ಜನರಿಗೆ ಬರದ ಬರೆ ತಟ್ಟ ತೊಡಗಿದೆ. ಈ ವರ್ಷ ಮುಂಗಾರು ಕೈ ಕೊಟ್ಟ ಹಿನ್ನೆಲೆ ರಾಜ್ಯದ ಬಹುತೇಕ ಡ್ಯಾಂಗಳಲ್ಲಿ ನೀರಿಲ್ಲ. ಮಹಾರಾಷ್ಟ್ದದಲ್ಲಿ ಮಳೆಯಾದ್ರೆ ನಾರಾಯಣಪುರ ಜಲಾಶಯ ಭರ್ತಿ ಆಗುತ್ತಿತ್ತು. ಇತ್ತ ಮಲೆನಾಡಿನಲ್ಲಿ (Rain) ತುಂಗಭದ್ರಾ ಡ್ಯಾಂ ಫುಲ್ ಆಗುತ್ತಿತ್ತು. ಈ ಎರಡು ಡ್ಯಾಂನ ನೀರು ನಂಬಿ ಬಿಸಿಲುನಾಡು ರಾಯಚೂರು ಜಿಲ್ಲೆಯ ರೈತರು(Farmers) ಪ್ರತಿ ವರ್ಷ ಎರಡು ಭತ್ತದ ಬೆಳೆ ಬೆಳೆಯುತ್ತಿದ್ರು. ಈ ವರ್ಷ ಮುಂಗಾರು ಮಳೆ ಕಡಿಮೆಯಾಗಿದ್ದರಿಂದ ಕಾಲುವೆಗಳಿಗೆ ಸಂಪರ್ಕವಾಗಿ ನೀರು ಬರುತ್ತಿಲ್ಲ. ಸದ್ಯ ಕಾಲುವೆ ನೀರು ನಂಬಿ ರೈತರು 1ಲಕ್ಷದ 70 ಸಾವಿರದ 363 ಹೆಕ್ಟರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ. ನಾಟಿ ಮಾಡಿದ ಭತ್ತಕ್ಕೂ(Paddy) ಸಂಪರ್ಕ ನೀರು ಬರುತ್ತಿಲ್ಲ. ಹೀಗಾಗಿ ನಾಟಿ ಮಾಡಿದ ಶೇ.20ರಷ್ಟು ಭತ್ತದ ಇಳುವರಿ ಕಡಿಮೆ ಆಗುವ ಆತಂಕದಲ್ಲಿ ರೈತರು ಇದ್ದಾರೆ. ಭತ್ತದ ಇಳುವರಿ ಕಡಿಮೆಯಾಗುವ ಭೀತಿ ಬೆನ್ನಲ್ಲೇ ಇತ್ತ ಮಾರುಕಟ್ಟೆಯಲ್ಲಿ ದಿನೇ ದಿನೇ ಅಕ್ಕಿ ಬೆಲೆ ಏರಿಕೆ ಆಗುತ್ತಿದ್ದರಿಂದ ಗ್ರಾಹಕರು ಸಹ ಕಂಗಾಲಾಗಿ ಹೋಗಿದ್ದಾರೆ.ಇನ್ನು ರೈತರು ಬೆಳೆಯುವ ಭತ್ತ ನಂಬಿಕೊಂಡೇ ರಾಯಚೂರು ಜಿಲ್ಲೆಯಲ್ಲಿ 85ಕ್ಕೂ ಹೆಚ್ಚು ರೈಸ್ಮಿಲ್ಗಳು ನಡೆಯುತ್ತಿವೆ. ರಾಜ್ಯದಲ್ಲಿ ಭತ್ತ ಸಿಗದೇ ಇದ್ದಾಗ ಬೇರೆ ರಾಜ್ಯದಿಂದಲೂ ಭತ್ತ ಖರೀದಿ ಮಾಡಿ ರೈಸ್ಮಿಲ್ಗಳು ನಡೆಸುತ್ತಿದ್ರು, ಆದ್ರೆ ಈ ವರ್ಷ ಎಲ್ಲಾ ಕಡೆಯೂ ಮಳೆ ಕಡಿಮೆ ಆಗಿದ್ದರಿಂದ ಶೇ. 80ರಷ್ಟು ರೈಸ್ ಮಿಲ್ಗಳು ಬಂದ್ ಆಗುವ ಸಾಧ್ಯತೆಯಿದೆ. ಜೊತೆಗೆ ಕ್ವಿಂಟಾಲ್ ಅಕ್ಕಿಗೆ 5-6 ಸಾವಿರ ರೂಪಾಯಿ ಇದ್ದ ಬೆಲೆ, 7 ಸಾವಿರ ಗಡಿದಾಟಿದ್ರು ಅಚ್ಚರಿ ಪಡಬೇಕಾಗಿಲ್ಲ ಅಂತಿದ್ದಾರೆ ರೈಸ್ ಮಿಲ್ ಮಾಲೀಕರು. 

ಇದನ್ನೂ ವೀಕ್ಷಿಸಿ:  ದಂತ ವೈದ್ಯನ ಎಡವಟ್ಟು..ವೃದ್ಧೆ ಸುಕನ್ಯಾ ನರಳಾಟ..!

Video Top Stories