Govt Employees Protest: ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಲು ಆಗ್ರಹ: ಸರ್ಕಾರಿ ನೌಕರರಿಂದ ಧರಣಿ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರಿಂದ ನಿನ್ನೆಯಿಂದ ಪ್ರತಿಭಟನೆ ಶುರುವಾಗಿದೆ.
ಬೆಂಗಳೂರಿನಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಲು ಆಗ್ರಹಿಸಿ, ಸರ್ಕಾರಿ ನೌಕರರಿಂದ ಆಹೋರಾತ್ರಿ ಧರಣಿ ನಡೆದಿದೆ. NPS ಅಡಿ ಎರಡು ಲಕ್ಷದ ಐವತ್ತು ಸಾವಿರ ನೌಕರರು ಹಾಗೂ ನಿಗಮ ಮಂಡಳಿಗಳಲ್ಲಿ ಮೂರು ಲಕ್ಷ ನೌಕರರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಜಿಲ್ಲೆಗಳಿಂದ ಬಂದ ಸಾವಿರಾರು ನೌಕರರು, ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗಿದ್ದಾರೆ. ನ್ಯೂ ಪೆನ್ಶನ್ ಸ್ಕೀಮ್ ರದ್ದು ಆಗಿದೆ. ಕರ್ನಾಟಕದಲ್ಲೂ ರದ್ದು ಮಾಡಬೇಕೆಂದು ಧರಣಿ ನಡೆದಿದೆ. ರಾಜಸ್ಥಾನ ಸೇರಿ ಹಲವು ರಾಜ್ಯದಲ್ಲಿ ನ್ಯೂ ಪೆನ್ಶನ್ ಸ್ಕೀಮ್ ರದ್ದು ಮಾಡಲಾಗಿದೆ.