ಕೊರೋನಾ ಸಮಯದಲ್ಲೂ ಚೀಪ್‌ ಪಾಲಿಟಿಕ್ಸ್: ಉಚಿತ ಸೇವೆಗೆ ನೀಡಿದ್ದ ಆಂಬುಲೆನ್ಸ್‌ ಸೀಜ್‌

* ಆಂಬುಲೆನ್ಸ್‌ ಸೀಜ್‌ ಮಾಡಿದ ತಹಶೀಲ್ದಾರ್‌ ಪ್ರಮೋದ್‌ ಪಾಟೀಲ್‌
* ಕೊರೋನಾ ಸೋಂಕಿತರಿಗೆ ಸಹಾಯವಾಗಲಿ ಅಂತ ಆಂಬುಲೆನ್ಸ್‌ ಕೊಟ್ಟಿದ್ದ ರೇವಣ್ಣ 
* ಆಂಬುಲೆನ್ಸ್‌ ಮೇಲೆ ದಾನಿಗಳ ಸ್ಟಿಕರ್‌ ಬಳಕೆ

First Published May 29, 2021, 12:03 PM IST | Last Updated May 29, 2021, 12:03 PM IST

ಪಾಂಡವಪುರ(ಮೇ.29): ಕೊರೋನಾ ಸಂಕಷ್ಟದ ಸಮಯದಲ್ಲೂ ಚೀಪ್‌ ಪಾಲಿಟಿಕ್ಸ್ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ. ಕೊರೋನಾ ಸೋಂಕಿತರಿಗೆ ಸಹಾಯವಾಗಲಿ ಅಂತ ಕೊಟ್ಟಂತ ಆಂಬುಲೆನ್ಸ್‌ಅನ್ನ ತಹಶೀಲ್ದಾರ್‌ ಪ್ರಮೋದ್‌ ಪಾಟೀಲ್‌ ಸೀಜ್‌ ಮಾಡಿದ್ದಾರೆ. 

ಸೋಂಕಿತರ ಜೊತೆ 'ಭಜರಂಗಿ' ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ರೇಣುಕಾಚಾರ್ಯ

ಆಂಬುಲೆನ್ಸ್‌ ಮೇಲೆ ದಾನಿಗಳ ಸ್ಟಿಕರ್‌ ಹಾಕಲಾಗಿದೆ ಅಂತ ಕಾರಣ ತಿಳಿಸಿ ಆಂಬುಲೆನ್ಸ್‌ ಸೀಜ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮೂರು ದಿನಗಳ ಹಿಂದೆ ತಹಶೀಲ್ದಾರ್‌ ಮುಂದೆಯೇ ಕಾಂಗ್ರೆಸ್‌ ಮುಖಂಡ ಬಿ. ರೇವಣ್ಣ ಅವರು ಆಂಬುಲೆನ್ಸ್‌ ನೀಡಿದ್ದರು. ಇದೀಗ ರೇವಣ್ಣಗೆ ತಹಶೀಲ್ದಾರ್‌ ಶಾಕ್‌ ಕೊಟ್ಟಿದ್ದಾರೆ.