Asianet Suvarna News Asianet Suvarna News

Mysuru College Students : ಪಾರ್ಕ್, ರೋಡ್ ಸುತ್ತಿ ಕ್ಲಾಸಿಗೆ ಕರೆತಂದ ಅಧ್ಯಾಪಕರು

ವಿದ್ಯಾರ್ಥಿಗಳಿಗಾಗಿ ಅಧ್ಯಾಪಕರ ವಿಶೇಷ ಕಾರ್ಯಾಚರಣೆ ಮೈಸೂರಿನಲ್ಲಿ ನಡೆದಿದೆ. ಇಲ್ಲಿನ ಪಾರ್ಕ್‌ ಸುತ್ತಾಡಿ ವಿದ್ಯಾರ್ಥಿಗಳನ್ನು ತರಗತಿಗೆ ಶಿಕ್ಷಕರು  ಕರೆದೊಯ್ದಿದ್ದಾರೆ.

First Published Jan 6, 2022, 3:01 PM IST | Last Updated Jan 6, 2022, 3:01 PM IST

 ಮೈಸೂರು (ಜ.06):  ವಿದ್ಯಾರ್ಥಿಗಳಿಗಾಗಿ (Student) ಅಧ್ಯಾಪಕರ ವಿಶೇಷ ಕಾರ್ಯಾಚರಣೆ ಮೈಸೂರಿನಲ್ಲಿ (Mysuru)  ನಡೆದಿದೆ. ಇಲ್ಲಿನ ಪಾರ್ಕ್‌ ಸುತ್ತಾಡಿ ವಿದ್ಯಾರ್ಥಿಗಳನ್ನು ತರಗತಿಗೆ ಶಿಕ್ಷಕರು (Teachers)  ಕರೆದೊಯ್ದಿದ್ದಾರೆ.  ತರಗತಿಗಳಿಗೆ ವಿದ್ಯಾರ್ಥಿಗಳನ್ನು ಕರೆತರಲು ಅಧ್ಯಾಪಕರು ಹರಸಾಹಸ ಪಟ್ಟಿದ್ದು ರಸ್ತೆ, ಪಾರ್ಕ್ ಎನ್ನದೇ ಎಲ್ಲೆಡೆ ಸುತ್ತಾಡಿ ತಮ್ಮ  ವಿದ್ಯಾರ್ಥಿಗಳನ್ನುಕರೆದೊಯ್ದಿದ್ದಾರೆ. 

Student Scholarships: ಈ ವಿದ್ಯಾರ್ಥಿ ವೇತನಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ? ತಪ್ಪದೇ ಇಂದೇ ಅರ್ಜಿ ಹಾಕಿ

 ಉಪನ್ಯಾಸಕರನ್ನು ಕಂಡು ಹಲವು ವಿದ್ಯಾರ್ಥಿಗಳು ದಿಕ್ಕಪಾಲಾಗಿ ಓಡಿದ್ದು,  ಅಧ್ಯಾಪಕರ ಈ ಅವಸ್ಥೆ ಕಂಡು ಸಾರ್ವಜನಿಕರು (Publics) ಮರುಗಿದ್ದಾರೆ. ತರಗತಿಗಳಿಗೆ ಬಂಕ್ ಹಾಕಿ ರಸ್ತೆ ಪಾರ್ಕ್ ಗಳಲ್ಲಿ ಕಾಲ ಕಳೆಯುತ್ತಿದ್ದ ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಸಾಹಪಟ್ಟಿದ್ದಾರೆ. ಇದರಲ್ಲಿ  ನಗರದ ಪ್ರತಿಷ್ಠಿತ ಕಾಲೇಜುಗಳ ವಿಧ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿದ್ದು,  ಮರಿಮಲ್ಲಪ್ಪ, ಹಾರ್ಡ್ವಿಕ್, ಮಹಾರಾಜ, ಇತ್ಯಾದಿ ಕಾಲೇಜುಗಳ ವಿಧ್ಯಾರ್ಥಿಗಳು ಸಾಮೂಹಿಕವಾಗಿ ತರಗತಿ ಬಂಕ್ ಮಾಡುತ್ತಿದ್ದಾರೆ.  ಹೀಗಾಗಿ ತರಗತಿಗಳಿಗೆ ವಿಧ್ಯಾರ್ಥಿಗಳನ್ನು ಕರೆತರಲು ಆಗಮಿಸಿದ ಉಪನ್ಯಾಸಕರು‌ ಮಹರಾಜ ಕಾಲೇಜಿನ ಪ್ರಾಂಶುಪಾಲರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಚೇಸಿಂಗ್ ಮಾಡಿದ್ದಾರೆ.