Asianet Suvarna News Asianet Suvarna News

ಬಾಗಲಕೋಟೆ: ಶಾಸಕ ಚರಂತಿಮಠ ರೌಂಡ್ಸ್‌, ವಾರ್ಡನ್‌ಗಳಿಗೆ ವಾರ್ನಿಂಗ್‌

ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ| ಶಾಸಕರೆದುರು ತಮ್ಮ ಅಳಲು ತೋಡಿಕೊಂಡ ಹಾಸ್ಟೆಲ್ ವಿದ್ಯಾರ್ಥಿನಿಯರು| ಹಾಸ್ಟೆಲ್‌ನಲ್ಲಿ ಸಮರ್ಪಕವಾಗಿ ಊಟ ನೀಡುತ್ತಿಲ್ಲ ಎಂದು ಆರೋಪಿಸಿದ ವಿದ್ಯಾರ್ಥಿನಿಯರು| 

ಬಾಗಲಕೋಟೆ(ಸೆ.16): ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಸ್ಥಳೀಯ ಶಾಸಕ ಶಾಸಕ ವೀರಣ್ಣ ಚರಂತಿಮಠ ಮಂಗಳವಾರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಭೇಟಿ ವೇಳೆ ಹಾಸ್ಟೆಲ್ ವಿದ್ಯಾರ್ಥಿನಿಯರು ಶಾಸಕರೆದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹಾಸ್ಟೆಲ್‌ನಲ್ಲಿ ಸಮರ್ಪಕವಾಗಿ ಊಟ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಡ್ರಗ್ಸ್ ಮಾಫಿಯಾ: ಸಿಸಿಬಿ ನೋಟಿಸ್, ನಟ ದಿಗಂತ್ ಫಸ್ಟ್ ರಿಯಾಕ್ಷನ್...!

ಇದೇ ಹಾಸ್ಟೆಲ್‌ನಲ್ಲಿ ಪುಸ್ತಕ, ಬ್ಯಾಗ್ ಸಹಿತ ಸಾಮಾನುಗಳು ಕಳುವಾಗಿರುವ ಬಗ್ಗೆ ವಿದ್ಯಾರ್ಥಿನಿಯರ ಗೋಳು ತೋಡಿಕೊಂಡಿದ್ದಾರೆ. ಇದೇ ಹಾಸ್ಟೆಲ್ ಮಹಿಳಾ ವಾರ್ಡನ್‌ ಕಾಂಬಳೆ ವಿರುದ್ಧ ವಿದ್ಯಾರ್ಥಿನಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ಥಳದಲ್ಲೇ ವಾರ್ಡನ್‌ ಕರೆಯಿಸಿ ಶಾಸಕ ಚರಂತಿಮಠ ವಾರ್ನಿಂಗ್ ಕೊಟ್ಟು, ಮಕ್ಕಳಿಗೆ ಊಟ ಸಹಿತ ಸಮರ್ಪಕವಾಗಿ ಸೌಲಭ್ಯ ನೀಡಲು ಸೂಚನೆ ನೀಡಿದ್ದಾರೆ. 
 

Video Top Stories