Asianet Suvarna News Asianet Suvarna News

ತಪ್ಪಿದ ಭಾರೀ ಅನಾಹುತ : ಮೆಟ್ರೋ ಲೇನ್‌ನಲ್ಲಿ 30 ಅಡಿ ಕುಸಿದ ಮಣ್ಣು

  •  ಮೆಟ್ರೋ ಕಾಮಗಾರಿಯಿಂದಾಗಬೇಕಿದ್ದ ಭಾರೀ ಅನಾಹುತ ಒಂದು ತಪ್ಪಿದೆ
  • ಮೆಟ್ರೋ ಕಾಮಗಾರಿಗೆ ಇತ್ತೀಚೆಗಷ್ಟೆ ಸುರಂಗ ಕೊರೆದು ಟಿಬಿಎಂ ಹೊರಬಂದಿತ್ತು. ಇಲ್ಲಿಯೇ  30 ಅಡಿ ಮಣ್ಣು ಕುಸಿದು ಅನಾಹುತವಾಗಿದೆ. 
     

ಬೆಂಗಳೂರು (ಸೆ.30): ಮೆಟ್ರೋ (Metro) ಕಾಮಗಾರಿಯಿಂದಾಗಬೇಕಿದ್ದ ಭಾರೀ ಅನಾಹುತ ಒಂದು ತಪ್ಪಿದೆ. ಟ್ಯಾನ್ರಿ ರಸ್ತೆಯಲ್ಲಿ ಮುಚ್ಚಿದ್ದ ಬಾವಿಗೆ ಮಣ್ಣು ಕುಸಿದಿದೆ. ಗೊಟ್ಟಿಗೆರೆಯಿಂದ ನಾಗವಾರದವರೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಗೆ ಇತ್ತೀಚೆಗಷ್ಟೆ ಸುರಂಗ ಕೊರೆದು ಟಿಬಿಎಂ (TBM) ಹೊರಬಂದಿತ್ತು. ಇಲ್ಲಿಯೇ  30 ಅಡಿ ಮಣ್ಣು ಕುಸಿದು ಅನಾಹುತವಾಗಿದೆ. 

ಕಂಟೋನ್ಮೆಂಟ್- ಶಿವಾಜಿನಗರ ಮೆಟ್ರೋ ಕಾಮಗಾರಿ: ಸುರಂಗ ಕೊರೆದು ಹೊರ ಬಂದ ಊರ್ಜಾ

ಟನಲ್ ಪ್ರೆಶರ್ಗೆ  ಮಣ್ಣು ಕುಸಿದು ಭಾರೀ ಸಮಸ್ಯೆ ಎದುರಾಗಿದೆ. ಮುಚ್ಚಿದ್ದ ಬಾವಿಗೆ ಮಣ್ಣು ಕುಸಿದು ಕೆಳಗೆ ಬಿದ್ದಿದೆ. ಮುಂಜಾನೆ 3 ಗಂಟೆಗೆ ಕುಸಿದು ಬಿದ್ದಿದ್ದು,  ಮಾಲೀಕ ಝಬೀ ಎಂಬವರಿಗೆ ಸೇರಿದ ಜಾಗದಲ್ಲಿ ಕುಸಿತವಾಗಿದೆ.  ಬಿಎಂಆರ್ಸಿಎಲ್ ಅಧಿಕಾರಿಗಳೇ ಇದಕ್ಕೆ ಕಾರಣ ಎಂದು ಆರೋಪ ಮಾಡಿದ್ದು,  ನಮ್ಮ ಮೆಟ್ರೋ ಈ ಜಾಗ ಪಡೆದು ಇದಕ್ಕೆ ಪರಿಹಾರ ನೀಡಲಿ ಎಂದು ಮಾಲಿಕರು ಆಗ್ರಹಿಸಿದ್ದಾರೆ.