ಲಾಕ್‌ಡೌನ್‌ ಭೀತಿ: ಗುಳೆ ಹೋದ ಕಾರ್ಮಿಕರು ಊರಿಗೆ ವಾಪಸ್‌..!

ಕೊರೋನಾ ಎರಡನೇ ಅಲೆ| ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ರೈಲ್ವೆ, ಖಾಸಗಿ ವಾಹನಗಳ ಮೂಲಕ ಜನರು ಆಗಮನ| ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯದಿಂದ ನೂರಾರು ಸಂಖ್ಯೆಯಲ್ಲಿ ಕೊಪ್ಪಳಕ್ಕೆ ಆಗಮಿಸಿದ ಕಾರ್ಮಿಕರು| 

First Published Apr 9, 2021, 2:28 PM IST | Last Updated Apr 9, 2021, 2:28 PM IST

ಕೊಪ್ಪಳ(ಏ.09): ಲಾಕ್‌ಡೌನ್‌ ಭೀತಿಯ ಮಧ್ಯೆ ನೂರಾರು ಕಾರ್ಮಿಕರು ಮರಳಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹೌದು, ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯದಿಂದ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ಬರುತ್ತಿದ್ದಾರೆ. ದೇಶಾದ್ಯಂತ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಉದ್ಯೋಗ ಅರಸಿ ಹೋಗಿದ್ದ ಕಾರ್ಮಿಕರು ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ರೈಲ್ವೆ, ಖಾಸಗಿ ವಾಹನಗಳ ಮೂಲಕ ಜನರು ಆಗಮಿಸುತ್ತಿದ್ದಾರೆ. 

ಸಂತೆ ಮೇಲೆ ತಹಸೀಲ್ದಾರ್ ದಾಳಿ : ಕೋವಿಡ್ ಹಿನ್ನೆಲೆ ಎಚ್ಚರಿಕೆ