ಎಡನೀರು ಮಠದ ಪೀಠಾಧಿಪತಿ ಕೇಶವಾನಂದ ಭಾರತೀ ಸ್ವಾಮೀಜಿ ಕೃಷ್ಣೈಕ್ಯ

ಎಡನೀರು ಮಠದ ಪೀಠಾಧಿಪತಿ ಕೇಶವಾನಂದ ಭಾರತೀ ಸ್ವಾಮೀಜಿ ನಿನ್ನೆ ರಾತ್ರಿ ಕೃಷ್ಣೈಕ್ಯರಾಗಿದ್ಧಾರೆ. ಇವರಿಗೆ 79 ವರ್ಷ ವಯಸ್ಸಾಗಿತ್ತು. ಶ್ರೀಗಳು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ರಾತ್ರಿ ಪೂಜೆ ಮುಗಿಸಿ, ಫಲಾಹಾರ ಸೇವಿಸಿದವರು ಮಧ್ಯರಾತ್ರಿ ಅಸ್ತಂಗತರಾಗಿದ್ದಾರೆ.

First Published Sep 6, 2020, 3:41 PM IST | Last Updated Sep 6, 2020, 3:43 PM IST

ಬೆಂಗಳೂರು (ಸೆ. 06): ಎಡನೀರು ಮಠದ ಪೀಠಾಧಿಪತಿ ಕೇಶವಾನಂದ ಭಾರತೀ ಸ್ವಾಮೀಜಿ ನಿನ್ನೆ ರಾತ್ರಿ ಕೃಷ್ಣೈಕ್ಯರಾಗಿದ್ಧಾರೆ. ಇವರಿಗೆ 79 ವರ್ಷ ವಯಸ್ಸಾಗಿತ್ತು. ಶ್ರೀಗಳು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ರಾತ್ರಿ ಪೂಜೆ ಮುಗಿಸಿ, ಫಲಾಹಾರ ಸೇವಿಸಿದವರು ಮಧ್ಯರಾತ್ರಿ ಅಸ್ತಂಗತರಾಗಿದ್ದಾರೆ. 

ಸಾಂಸ್ಕೃತಿಕವಾಗಿ ಅಪಾರ ಆಸಕ್ತಿ ಹೊಂದಿದ ಶ್ರೀಗಳು ಕಾಸರಗೋಡು ಸಂಸ್ಥಾನದಲ್ಲಿ ಯಕ್ಷಗಾನ, ಸಂಗೀತ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಯಕ್ಷಗಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಸ್ವತಃ ಭಾಗವತಿಕೆಯನ್ನೂ ಮಾಡುತ್ತಿದ್ದರು. ಶ್ರೀಗಳ ನಿಧನಕ್ಕೆ ನಳೀನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.

ಬೆಂಗ್ಳೂರು - ಮಂಗ್ಳೂರು ರೈಲು ಸಂಚಾರ ಆರಂಭ