Asianet Suvarna News Asianet Suvarna News

Covid 19 Spike: ಲಾಕ್‌ಡೌನ್‌ ಭೀತಿಯಿಂದ ಉತ್ತರಕನ್ನಡದಲ್ಲಿ ಮತ್ಸ್ಯೋದ್ಯಮಕ್ಕೆ ಕಾರ್ಮಿಕರ ಕೊರತೆ!

*ಒಮಿಕ್ರಾನ್ ಭೀತಿಯಿಂದಾಗಿ ಮೀನುಗಾರಿಕಾ‌ ಕ್ಷೇತ್ರಕ್ಕೆ ಮತ್ತೆ ಸಂಕಷ್ಟ 
*ತಮ್ಮ ಊರುಗಳಿಗೆ ವಾಪಾಸಾಗುತ್ತಿರುವ ಹೊರ ರಾಜ್ಯದ ಕಾರ್ಮಿಕರು
*ಲಾಕ್‌ಡೌನ್‌ ಭೀತಿಯಿಂದ  ಮತ್ಸ್ಯೋದ್ಯಮಕ್ಕೆ ಕಾರ್ಮಿಕರ  ಕೊರತೆ
*ಒಂದು ಕಡೆ ಮೀನುಗಳ ಕ್ಷಾಮ, ಮತ್ತೊಂದಡೆ ವೀಕೆಂಡ್‌ ಕರ್ಫ್ಯೂ
*ಬಂದರಿನಲ್ಲಿ ಲಂಗರು ಹಾಕಿರುವ ಮೀನುಗಾರಿಕಾ ಬೋಟ್‌ಗಳು

ಕಾರವಾರ (ಜ. 18): ಕೊರೋರೊನಾ ಹಾಗೂ ಇದರ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿಯಿಂದಾಗಿ (Omicron Variant) ಮೀನುಗಾರಿಕಾ‌ ಕ್ಷೇತ್ರಕ್ಕೆ (Fisheries Sector) ಮತ್ತೆ ಸಂಕಷ್ಟ ಎದುರಾಗಿದೆ. ಮಹಾಮಾರಿಯ ಭೀತಿಯಿಂದಾಗಿ ತಮ್ಮ ತಮ್ಮ ಊರುಗಳಿಗೆ ತೆರಳಿರುವ ಮಾಡಿರುವ ಹೊರ ರಾಜ್ಯದ ಕಾರ್ಮಿಕರು ಮತ್ತೆ ಹಿಂತಿರುಗದ ಕಾರಣ ಕಾರ್ಮಿಕರ ಕೊರತೆಯಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಹಲವು ಮೀನುಗಾರಿಕಾ ಬೋಟ್‌ಗಳು ಬಂದರಿನಲ್ಲೇ ಠಿಕಾಣಿ ಹೂಡಿವೆ. ಒಂದೆಡೆ ಮೀನುಗಳ ಕ್ಷಾಮ, ಮತ್ತೊಂದೆಡೆ ಕಾರ್ಮಿಕರ ಕೊರತೆಯಿಂದಾಗಿ ಬೋಟ್ ಮಾಲಕರು ನಷ್ಟದ ಕೂಪಕ್ಕೆ ಉರುಳುತ್ತಿದ್ದಾರೆ. 

ಇದನ್ನೂ ಓದಿ: Fishery ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಬಿದ್ದ ಮೊಸಳೆ ಮರಿ, ಬೆಚ್ಚಿಬಿದ್ದ ಮೀನುಗಾರರು

ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದ್ದ ಸಮಯದಲ್ಲೇ ಉತ್ತರಕನ್ನಡ ಜಿಲ್ಲೆಯಿಂದ ಪಲಾಯನ ಮಾಡಿದ್ದ ಒರಿಸ್ಸಾ, ಝಾರ್ಖಂಡ್, ಉತ್ತರಪ್ರದೇಶ, ತಮಿಳುನಾಡು ಮೂಲದ ಕಾರ್ಮಿಕರು, ಬಳಿಕ ಸೋಂಕಿನ ಪ್ರಮಾಣ ಕಡಿಮೆಯಾದಂತೆ‌ ಕೆಲವರು ಮತ್ತೆ ವಾಪಾಸ್ ಬಂದು ಮೀನುಗಾರಿಕಾ ಕ್ಷೇತ್ರದಲ್ಲಿ ದುಡಿಯುತ್ತಿದ್ದರು. ಆದರೆ, ಇದೀಗ ಮತ್ತೆ ಕೊರೊನಾದೊಂದಿಗೆ ಅದರ ರೂಪಾಂತರಿ ವೈರಸ್ ಒಮಿಕ್ರಾನ್ ಕೂಡಾ ವಕ್ಕರಿಸಿರೋದ್ರಿಂದ ಲಾಕ್‌ಡೌನ್ ಆಗಬಹುದು ಅನ್ನೋ ಭೀತಿಯೊಂದಿಗೆ ಹೊರ ರಾಜ್ಯದ ಕಾರ್ಮಿಕರು ತಮ್ಮ ರಾಜ್ಯಗಳತ್ತವೇ ಮುಖ ಮಾಡಿದ್ದಾರೆ. ಇದರಿಂದಾಗಿ ಮೀನುಗಾರಿಕಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಕಾರ್ಮಿಕರ ಕೊರತೆಯುಂಟಾಗಿದ್ದು, ಸಾಕಷ್ಟು ಬೋಟ್‌ಗಳು 100ರಿಂದ 200 ಬೋಟುಗಳು ಬಂದರಿನಲ್ಲೇ ನಿಲ್ಲಿಸಲ್ಪಟ್ಟಿವೆ. ಶೇ. 60ರಿಂದ 75ರಷ್ಟು ಹೊರ ರಾಜ್ಯದ ಕಾರ್ಮಿಕರು ರೀ ಎಂಟ್ರಿ ಕೊಡದ ಕಾರಣ ಮೀನುಗಾರಿಕೆಗೆ ಭಾರೀ ಏಟು ಬಿದ್ದಿದ್ದು, ಬೋಟ್ ಮಾಲಕರು ನಷ್ಟವನ್ನು ಎದುರಿಸುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ... 

Video Top Stories