ಆಲೂಗಡ್ಡೆಗೆ ಕಳ್ಳರ ಹಾವಳಿ; ಬೆಳೆಗಳಿಗೆ ರಕ್ಷಣೆ ನೀಡುವಂತೆ ಪೋಲಿಸರಿಗೆ ರೈತರ ಕಳಕಳಿ
ಕೋಲಾರ ಜಿಲ್ಲೆಯಲ್ಲಿ ಆಲೂಗಡ್ಡೆ ಕಳ್ಳರು ಹೆಚ್ಚುತ್ತಿದ್ದಾರೆ. 35 ಮೂಟೆಯಷ್ಟು ಆಲೂಗಡ್ಡೆ ಬೆಳೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಬಂಗಾರಪೇಟೆ ತಾಲೂಕಿನ ಉಕ್ಕುಂದ ಗ್ರಾಮದ ರೈತ ಕೃಷ್ಣಪ್ಪ ಸೇರಿದ ತೋಟದಲ್ಲಿ 20 ಮೂಟೆ, ಬೂದಿಕೋಟೆ ಗ್ರಾಮದ ರೈತ ವೆಂಕಟೇಶ್ ಶೆಟ್ಟಿಗೆ ಸೇರಿದ 15 ಮೂಟೆ ಕಳುವು ಮಾಡಿದ್ಧಾರೆ.
ಬೆಂಗಳೂರು (ಡಿ. 17): ಕೋಲಾರ ಜಿಲ್ಲೆಯಲ್ಲಿ ಆಲೂಗಡ್ಡೆ ಕಳ್ಳರು ಹೆಚ್ಚುತ್ತಿದ್ದಾರೆ. 35 ಮೂಟೆಯಷ್ಟು ಆಲೂಗಡ್ಡೆ ಬೆಳೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಬಂಗಾರಪೇಟೆ ತಾಲೂಕಿನ ಉಕ್ಕುಂದ ಗ್ರಾಮದ ರೈತ ಕೃಷ್ಣಪ್ಪ ಸೇರಿದ ತೋಟದಲ್ಲಿ 20 ಮೂಟೆ, ಬೂದಿಕೋಟೆ ಗ್ರಾಮದ ರೈತ ವೆಂಕಟೇಶ್ ಶೆಟ್ಟಿಗೆ ಸೇರಿದ 15 ಮೂಟೆ ಕಳುವು ಮಾಡಿದ್ಧಾರೆ.
ಫಸಲು ಬಂದು ಇನ್ನೇನೂ ಬೆಳೆ ಕೀಳುವ ಸಮಯದಲ್ಲಿ ಕಳ್ಳರು ದುರ್ಷ್ಕತ್ಯ ಎಸಗಿದ್ದು, ಬೆಳೆಗಾರರು ಸಂಕಷ್ಟಪಡುವ ಹಾಗಾಗಿದೆ. ಫಸಲು ಕೈ ತಪ್ಪಿ ಹೋಯಿತಲ್ಲ ಎಂದು ಪರಿತಪಿಸುದ್ದಾರೆ. ಬೆಳೆಗಳಿಗೆ ರಕ್ಷಣೆ ನೀಡುವಂತೆ ಪೋಲಿಸರಿಗೆ ಮನವಿ ಮಾಡಿದ್ಧಾರೆ.